alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿಗೆ ಕ್ಯಾಪ್ಟನ್ ಪಟ್ಟವನ್ನು ಬಿಟ್ಟುಕೊಟ್ಟ ಗುಟ್ಟನ್ನು ಈಗ ಬಿಚ್ಚಿಟ್ಟ ಧೋನಿ

ಮಹೇಂದ್ರ ಸಿಂಗ್ ಧೋನಿ ಏನೇ ಮಾಡಿದ್ರೂ ಅದಕ್ಕೆ ಒಂದು ಅರ್ಥ ಇರುತ್ತದೆ. ಅಳೆದು ತೂಗಿ ಮಾಹಿ ತಮ್ಮ ನಿರ್ಧಾರವನ್ನು ಪ್ರಕಟಿಸುತ್ತಾರೆ. ಎಂ.ಎಸ್.ಡಿ. ನಿರ್ಣಯಗಳು ವರ್ತಮಾನದಲ್ಲಿ ಅಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿಸಿದ್ರೂ, ಭವಿಷ್ಯದ ದೃಷ್ಠಿಯಿಂದ ಒಳ್ಳೆಯದೇ ಆಗಿರುತ್ತದೆ.

ಅಂದಹಾಗೆ ಟೀಮ್ ಇಂಡಿಯಾ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾಗಿರುವ ಮಹೇಂದ್ರ ಸಿಂಗ್ ಧೋನಿ, ನಾಯಕತ್ವದಿಂದ ಕೆಳಗಿಳಿದು ವರ್ಷಗಳೇ ಕಳೆದಿವೆ. ಆದ್ರೆ, ಈಗ ಮಾಹಿ ತಾವು ನಾಯಕತ್ವವನ್ನು ಬಿಡಲು ಕಾರಣ ಏನು ಎಂಬುದನ್ನು ತಿಳಿಸಿದ್ದಾರೆ. 2019 ರ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ವಿರಾಟ್ ಕೊಹ್ಲಿಗೆ, ತಂಡ ಕಟ್ಟಲು ಬೇಕಾದಷ್ಟು ಸಮಯ ದೊರಕಲಿ ಎಂಬ ಉದ್ದೇಶಕ್ಕಾಗಿ ನಾಯಕ ಸ್ಥಾನವನ್ನು ಬಿಡಬೇಕಾಯಿತು ಎಂದು ಧೋನಿ ತಮ್ಮ ಮನದಾಳದ ಮಾತುಗಳನ್ನು ತಿಳಿಸಿದ್ದಾರೆ.

ಯಂಗ್ ಕ್ಯಾಪ್ಟನ್ ಗೆ ಬೇಕಾದಷ್ಟು ಸಮಯ ನೀಡಬೇಕು. ಇಲ್ಲದೆ ಇದ್ದರೆ, ತಂಡವನ್ನು ಕಟ್ಟಲು ಆಗದು. ಎಲ್ಲ ಆಟಗಾರರ ಬಲ ಹಾಗೂ ನ್ಯೂನತೆಗಳನ್ನು ಗುರುತಿಸಿ, ಉತ್ತಮ ತಂಡದ ರಚನೆಗೆ ಕಾಲಾವಕಾಶ ಬೇಕು. ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ಮಾಡಿದ ಸಮಾಧಾನ ನನಗಿದೆ ಎಂದು ಧೋನಿ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...