alex Certify
ಕನ್ನಡ ದುನಿಯಾ       Mobile App
       

Kannada Duniya

ಕುಂಬ್ಳೆ ಕೋಚ್ ಹುದ್ದೆಗೆ ಕಂಟಕ ಎದುರಾಗಲು ಇದೇ ಕಾರಣ!

Indian cricket team head coach, Anil Kumble, gets ready to bowl at the nets during a training session at National Cricket Academy in Bangalore, India, Thursday, June 30, 2016. Indian cricket team is scheduled to travel to West Indies to play a four-match test series starting July 21, 2016. (AP Photo/Aijaz Rahi)

ಟೀಂ ಇಂಡಿಯಾ ಕೋಚ್ ಅಂದ್ರೆ ಅತ್ಯಂತ ಗೌರವಾನ್ವಿತ ಹಾಗೂ ಲಾಭದಾಯಕ ಹುದ್ದೆ. ಸದ್ಯ ಈ ಜವಾಬ್ಧಾರಿ ಅನಿಲ್ ಕುಂಬ್ಳೆ ಅವರ ಮೇಲಿದೆ. ವರ್ಷದ ಹಿಂದಷ್ಟೆ ಅನಿಲ್ ಕುಂಬ್ಳೆ ಅವರನ್ನು ಭಾರತ ತಂಡದ ಕೋಚ್ ಆಗಿ ನೇಮಕ ಮಾಡಲಾಗಿತ್ತು.

ಈಗ ಬಿಸಿಸಿಐ ಹೊಸ ತರಬೇತುದಾರರ ಹುಡುಕಾಟದಲ್ಲಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಇನ್ನೆರಡು ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗ್ತಿದ್ದು, ಪಾಕಿಸ್ತಾನದ ಜೊತೆಗಿನ ಹೈವೋಲ್ಟೇಜ್ ಮ್ಯಾಚ್ ಗೆ ಟೀಂ ಇಂಡಿಯಾ ಸಜ್ಜಾಗಬೇಕಿದೆ.

ಆದ್ರೆ ಮೂಲಗಳ ಪ್ರಕಾರ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್ ನಲ್ಲಿ ಎಲ್ಲವೂ ಸರಿಯಿಲ್ಲ. ಇದಕ್ಕೆ ಕಾರಣ ಕೋಚ್ ಅನಿಲ್ ಕುಂಬ್ಳೆ ಅವರ ಸರ್ವಾಧಿಕಾರಿ ಧೋರಣೆ ಎನ್ನಲಾಗ್ತಾ ಇದೆ. ತಮಗೆ ಫ್ರೀಡಂ ಸಿಕ್ತಾ ಇಲ್ಲ ಅನ್ನೋದು ಆಟಗಾರರ ಅಳಲು. ಹಾಗಾಗಿ ಕುಂಬ್ಳೆ ಮತ್ತು ಟೀಂ ಇಂಡಿಯಾ ಆಟಗಾರರ ಮಧ್ಯೆ ಎಲ್ಲವೂ ಸರಿಯಿಲ್ಲ ಎನ್ನಲಾಗ್ತಿದೆ.

ಪರ್ಫಾರ್ಮೆನ್ಸ್ ವಿಚಾರಕ್ಕೆ ಬಂದ್ರೆ ಯಾರೂ ಕುಂಬ್ಳೆ ಅವರತ್ತ ಬೊಟ್ಟು ಮಾಡುವಂತಿಲ್ಲ. ಕುಂಬ್ಳೆ ಗರಡಿಯಲ್ಲಿ ಟೀಂ ಇಂಡಿಯಾ ಸತತ ಐದು ಸರಣಿಗಳನ್ನು ಗೆದ್ದಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ಸರಣಿಯಲ್ಲೂ ಜಯಗಳಿಸಿದೆ. ತವರಿನಲ್ಲಿ ನಡೆದ 13 ಟೆಸ್ಟ್ ಗಳಲ್ಲಿ 10 ಪಂದ್ಯವನ್ನು ಗೆದ್ದುಕೊಂಡಿದೆ.

ಆದ್ರೆ ತಮಗನಿಸಿದ್ದನ್ನು ವ್ಯಕ್ತಪಡಿಸಲು ಸ್ವಾತಂತ್ರ್ಯವಿಲ್ಲ ಅಂತಾ ಹಿರಿಯ ಮತ್ತು ಕಿರಿಯ ಆಟಗಾರರು ಬಿಸಿಸಿಐಗೆ ದೂರು ನೀಡಿದ್ದಾರಂತೆ. ಹೊಸ ಕೋಚ್ ನೇಮಕ ಮಾಡಿ ಅಂತಾ ಒತ್ತಾಯಿಸಿದ್ದಾರಂತೆ. ಹಾಗಾಗಿ ಕುಂಬ್ಳೆ ಕೋಚ್ ಹುದ್ದೆಗೆ ಕಂಟಕ ಬಂದಿದೆ.

ಭಾರತ ತಂಡದ ಹೊಸ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರನ್ನು ಆಯ್ಕೆ ಮಾಡಬೇಕು ಎಂಬ ಮಾತುಗಳು ಕೂಡ ಕೇಳಿಬಂದಿವೆ. ಸದ್ಯ ದ್ರಾವಿಡ್ ಇಂಡಿಯಾ-ಎ ಹಾಗೂ ಅಂಡರ್-19 ತಂಡದ ತರಬೇತುದಾರರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...