alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ಕೊಹ್ಲಿ-ಕುಂಬ್ಳೆ ನಡುವಿನ ಕಲಹದ ಕಾರಣ

anil-kumble-virat-kohli-ptiಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆಗಿನ ಭಿನ್ನಾಭಿಪ್ರಾಯದ ಕಾರಣಕ್ಕೆ ಅನಿಲ್ ಕುಂಬ್ಳೆ ತಮ್ಮ ಕೋಚ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅನಿಲ್ ಕುಂಬ್ಳೆಯವರ ಅವಧಿ ಮುಗಿದಿತ್ತಾದರೂ ಅವರ ತರಬೇತಿಯಲ್ಲಿ ಟೀಮ್ ಇಂಡಿಯಾ ಯಶಸ್ಸು ಕಂಡಿದ್ದ ಕಾರಣ ಮತ್ತೊಂದು ಅವಧಿಗೆ ಕುಂಬ್ಳೆಯವರನ್ನೇ ಮುಂದುವರೆಸಲು ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಹಾಗೂ ವಿವಿಎಸ್ ಲಕ್ಷ್ಮಣ್ ನೇತೃತ್ವದ ಸಮಿತಿ ಬಯಸಿತ್ತಾದರೂ ಅದು ಕೈಗೂಡಿಲ್ಲ.

ವಿರಾಟ್ ಕೊಹ್ಲಿ ಹಾಗೂ ಅನಿಲ್ ಕುಂಬ್ಳೆಯವರೊಂದಿಗಿನ ಮಾತುಕತೆ ವೇಳೆ ಇಬ್ಬರ ನಡುವಿನ ಸಂಘರ್ಷ ಇತ್ತೀಚಿಗಿನದ್ದಲ್ಲ. ಬದಲಾಗಿ ಆರು ತಿಂಗಳ ಹಿಂದೆ ನಡೆದ ಇಂಗ್ಲೆಂಡ್ ವಿರುದ್ದದ ಸರಣಿಯಲ್ಲೇ ಇದು ಆರಂಭವಾಗಿದೆ ಎಂಬುದು ಬೆಳಕಿಗೆ ಬಂದಿದೆ.

ಕ್ಯಾಪ್ಟನ್ ಆಗಿರುವ ತಮಗೂ ಕೆಲವೊಂದು ನಿರ್ಧಾರಗಳನ್ನು ಕೈಗೊಳ್ಳಲು ಸ್ವಾತಂತ್ರ್ಯವಿರಬೇಕೆಂದು ಪ್ರತಿಪಾದಿಸುತ್ತಿದ್ದ ವಿರಾಟ್ ಕೊಹ್ಲಿ, ಇಂಗ್ಲೆಂಡ್ ಸರಣಿ ವೇಳೆ ಅನುಭವಿ ಆಟಗಾರ ಅನಿಲ್ ಕುಂಬ್ಳೆಯವರ ಕೆಲ ಸಲಹೆಗಳನ್ನು ನಿರ್ಲಕ್ಷಿಸಿದ್ದೆ ಇಬ್ಬರ ನಡುವೆ ಬಿರುಕು ಮೂಡಲು ಕಾರಣವೆನ್ನಲಾಗಿದೆ. ಆ ನಂತರ ಇಬ್ಬರೂ ಪರಸ್ಪರ ಮಾತುಕತೆ ನಡೆಸುವುದನ್ನೂ ಬಿಟ್ಟಿದ್ದರೆನ್ನುವ ಮಾತುಗಳು ಕೇಳಿ ಬರುತ್ತಿವೆ.

ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನದ ವಿರುದ್ದ ಪರಾಭವಗೊಂಡ ಬಳಿಕ ಅನಿಲ್ ಕುಂಬ್ಳೆಯವರನ್ನೇ ಮತ್ತೊಂದು ಅವಧಿಗೆ ಮುಂದುವರೆಸಲು ಬಯಸಿದ್ದ ಬಿಸಿಸಿಐ ಪದಾಧಿಕಾರಿಗಳು ಅನಿಲ್ ಕುಂಬ್ಳೆ ಹಾಗೂ ವಿರಾಟ್ ಕೊಹ್ಲಿ ನಡುವೆ ಮುಖಾಮುಖಿ ಮಾತುಕತೆ ಏರ್ಪಡಿಸಿದರೂ ಸಹಮತ ಮೂಡಲಿಲ್ಲವೆನ್ನಲಾಗಿದೆ. ಹೀಗಾಗಿ ಟೀಮ್ ಇಂಡಿಯಾ ಜೊತೆ ಬಾರ್ಬಡೋಸ್ ಗೆ ತೆರಳಲು ಅನಿಲ್ ಕುಂಬ್ಳೆಯವರಿಗೆ ಟಿಕೇಟ್ ಬುಕ್ ಮಾಡಿದ್ದರೂ ತಮ್ಮ ಕೋಚ್ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಅನಿಲ್ ಕುಂಬ್ಳೆ ಭಾರತಕ್ಕೆ ಮರಳಿದರೆಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...