alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟ್ ಹೊರತುಪಡಿಸಿ ಕುಲದೀಪ್ ಯಾದವರ ಮತ್ತೊಂದು ನೆಚ್ಚಿನ ಕ್ರೀಡೆ ಯಾವುದು ಗೊತ್ತಾ?

ಟೀಂ ಇಂಡಿಯಾ ಆಟಗಾರ ಕುಲದೀಪ್ ಯಾದವ್ ಎದುರಾಳಿ ಬ್ಯಾಟ್ಸ್ ಮನ್ ಗಳ ನಿದ್ದೆಗೆಡಿಸಿದ್ದಾರೆ. ಅದರಲ್ಲೂ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಕೇವಲ 25 ರನ್ ನೀಡಿ ಆರು ವಿಕೆಟ್ ಕಬಳಿಸಿದ್ದು, ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಇಂದು ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯ ನಡೆಯುತ್ತಿದ್ದು, ಇದರಲ್ಲೂ ಉತ್ತಮ ಪ್ರದರ್ಶನ ತೋರಿಸುವ ವಿಶ್ವಾಸ ಹೊಂದಿರುವ ಕುಲದೀಪ್ ಯಾದವ್, ಇದರ ಮಧ್ಯೆಯೂ ತಮ್ಮ ನೆಚ್ಚಿನ ಮತ್ತೊಂದು ಕ್ರೀಡೆ ಕುರಿತು ಅತೀವ ಕುತೂಹಲ ಹೊಂದಿದ್ದಾರೆ.

ಕ್ರಿಕೆಟ್ ಹೊರತುಪಡಿಸಿ ಫುಟ್ಬಾಲ್ ಕುಲದೀಪ್ ಯಾದವ್ ರ ಮತ್ತೊಂದು ನೆಚ್ಚಿನ ಕ್ರೀಡೆಯಾಗಿದ್ದು, ಅದರಲ್ಲೂ ಬ್ರೆಜಿಲ್ ತಂಡದ ಕಟ್ಟಾ ಅಭಿಮಾನಿಯಾಗಿದ್ದಾರೆ. ವಿಶ್ವಕಪ್ ಫೈನಲ್ ನಿಂದ ಬ್ರೆಜಿಲ್ ಹೊರ ಬಿದ್ದಿದ್ದರೂ ಭಾನುವಾರ ನಡೆಯಲಿರುವ ಫ್ರಾನ್ಸ್ ಹಾಗೂ ಕ್ರೊಯೇಷಿಯಾ ನಡುವಿನ ಫುಟ್ಬಾಲ್ ಫೈನಲ್ ಪಂದ್ಯದಲ್ಲಿ ಕುಲದೀಪ್ ಯಾದವ್ ಫ್ರಾನ್ಸ್ ತಂಡವನ್ನು ಬೆಂಬಲಿಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...