alex Certify
ಕನ್ನಡ ದುನಿಯಾ       Mobile App
       

Kannada Duniya

300 ಏಕದಿನ ಪಂದ್ಯ ಆಡಿರುವ ನಾನು ಹುಚ್ಚನಾ…? ಕೋಪದಲ್ಲಿ ಹೀಗೆ ಪ್ರಶ್ನಿಸಿದ್ರು ಧೋನಿ

ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಎಲ್ಲರ ಅಚ್ಚುಮೆಚ್ಚು. ಸಹ ಆಟಗಾರರಿಂದ ಹಿಡಿದು ಅಭಿಮಾನಿಗಳವರೆಗೆ ಎಲ್ಲರೂ ಧೋನಿಗೆ ಜೈ ಎನ್ನುತ್ತಾರೆ. ಕೂಲ್ ಕ್ಯಾಪ್ಟನ್ ಎಂದೇ ಹೆಸರು ಪಡೆದಿರುವ ಧೋನಿ ಸಹ ಆಟಗಾರರಿಗೆ ಸದಾ ಸಲಹೆ, ಬೆಂಬಲ ನೀಡ್ತಾರೆ. ಇದನ್ನು ಕುಲ್ದೀಪ್ ಯಾದವ್ ಕೂಡ ಒಪ್ಪಿಕೊಂಡಿದ್ದಾರೆ.

ಯುಟ್ಯೂಬ್ ಚಾನೆಲ್ ನಲ್ಲಿ ಬರುವ ಟಾಕ್ ಶೋ ಒಂದರಲ್ಲಿ ಮಾತನಾಡಿದ ಕುಲ್ದೀಪ್, ಧೋನಿ ಸದಾ ಸಹಾಯ ಮಾಡ್ತಾರೆ. ಆಗಾಗ ಸಲಹೆಗಳನ್ನು ನೀಡ್ತಿರುತ್ತಾರೆ. ಒಮ್ಮೆ ಧೋನಿ ನೀಡಿದ ಸಲಹೆಯನ್ನ ನಾನು ತಿರಸ್ಕರಿಸಿದ್ದೆ. ಇದ್ರಿಂದ ಕೋಪಗೊಂಡ ಧೋನಿ, 300 ಏಕದಿನ ಪಂದ್ಯಗಳನ್ನು ಆಡಿರುವ ನಾನು ಹುಚ್ಚನಾ ಎಂದು ಪ್ರಶ್ನೆ ಮಾಡಿದ್ದರಂತೆ. ಇದಕ್ಕೆ ಹೆದರಿದ ಕುಲ್ದೀಪ್, ಧೋನಿ ಹೇಳಿದಂತೆ ಬದಲಾವಣೆ ಮಾಡಿಕೊಂಡ್ರಂತೆ. ತಕ್ಷಣ ಒಂದು ವಿಕೆಟ್ ಬಿತ್ತಂತೆ. ನಿನಗೆ ಇದನ್ನು ಅರ್ಥ ಮಾಡಿಸಲು ನಾನು ಹೀಗೆ ಮಾತನಾಡಿದೆ ಎಂದು ಧೋನಿ ನಂತ್ರ ಕುಲ್ದೀಪ್ ಗೆ ಹೇಳಿದ್ರಂತೆ,

ಇದೇ ಮೊದಲಲ್ಲ, ಈ ಹಿಂದೆ ಕೂಡ ಕುಲ್ದೀಪ್, ಧೋನಿಯನ್ನು ಹೊಗಳಿದ್ದರು. ಮೊದಲ ಪಂದ್ಯದಿಂದಲೂ ಧೋನಿ ನನಗೆ ಸಲಹೆ ನೀಡುತ್ತ ಬಂದಿದ್ದಾರೆ. ಅವ್ರು ವಿಕೆಟ್ ಹಿಂಭಾಗದಲ್ಲಿ ನಿಂತು ನೀಡುವ ಸಲಹೆ ವಿಕೆಟ್ ಕಬಳಿಸಲು ನೆರವಾಗುತ್ತದೆ ಎಂದು ಕುಲ್ದೀಪ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...