alex Certify
ಕನ್ನಡ ದುನಿಯಾ       Mobile App
       

Kannada Duniya

ಸೊಳ್ಳೆ ಕಾಟಕ್ಕೆ ಸುಸ್ತಾದ ಗಂಗೂಲಿ

ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ ಸೊಳ್ಳೆ ಕಾಟಕ್ಕೆ ಸುಸ್ತಾಗಿದ್ದಾರೆ. ಶೀಘ್ರದಲ್ಲಿಯೇ ಕೋಲ್ಕತ್ತಾ ಪಾಲಿಕೆ ಗಂಗೂಲಿಗೆ ನೊಟೀಸ್ ನೀಡುವ ತಯಾರಿಯಲ್ಲಿದೆ. ಡೆಂಗ್ಯು ಹರಡುವ ಸೊಳ್ಳೆ ಗಂಗೂಲಿ ಮನೆ ಬಳಿ ಸಿಕ್ಕಿರುವುದೇ ಇದಕ್ಕೆ ಕಾರಣವಾಗಿದೆ.

ಸೌರವ್ ಗಂಗೂಲಿ ಸಹೋದರ ಹಾಗೂ ಮಾಜಿ ರಣಜಿ ಆಟಗಾರ ಸ್ನೇಹಶಿಶ್ ಡೆಂಗ್ಯೂವಿಗೆ ತುತ್ತಾಗಿದ್ದಾರೆ. ಕೋಲ್ಕತ್ತಾ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನಡೆಯುತ್ತಿದೆ. ಈ ಮಧ್ಯೆ ಗಂಗೂಲಿ ಮನೆ ಬಳಿ ಡೆಂಗ್ಯೂ ಹರಡುವ ಲಾರ್ವಾ ಸೊಳ್ಳೆ ಪತ್ತೆಯಾಗಿದೆ. ನವೆಂಬರ್ 19ರಂದು ಲಾರ್ವಾ ಸೊಳ್ಳೆ ಪತ್ತೆಯಾಗಿದ್ದು, ಸುತ್ತ ಮುತ್ತಲ ಪ್ರದೇಶವನ್ನು ಸ್ವಚ್ಛವಾಗಿಡುವಂತೆ ಸೂಚನೆ ನೀಡಲಾಗಿತ್ತು.

ಗುರುವಾರ ಮತ್ತೊಮ್ಮೆ ಪಾಲಿಕೆ ಗಂಗೂಲಿ ಮನೆ ವರಾಂಡದಲ್ಲಿ ಪರಿಶೀಲನೆ ನಡೆಸಿದೆ. ಈ ವೇಳೆ ಲಾರ್ವಾ ಸೊಳ್ಳೆ ಕಾಣಿಸಿಕೊಂಡಿದ್ದು, ಪಾಲಿಕೆ ಸಲಹೆಯನ್ನು ಗಂಗೂಲಿ ಪಾಲಿಸಿಲ್ಲ. ನಿಯಮದಂತೆ ಗಂಗೂಲಿಗೆ ನೊಟೀಸ್ ನೀಡುವುದಾಗಿ ಹೇಳಿದೆ.

 

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...