alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಹೋರಾಟ ವ್ಯರ್ಥ, ಕೆ.ಕೆ.ಆರ್.ಗೆ ಭರ್ಜರಿ ಜಯ

ಬೆಂಗಳೂರು: ನಾಯಕ ವಿರಾಟ್ ಕೊಹ್ಲಿ ಭರ್ಜರಿ ಅರ್ಧ ಶತಕ ಗಳಿಸಿದ್ರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಜಯ ಸಿಗಲಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 6 ವಿಕೆಟ್ ಅಂತರದಿಂದ ಜಯಗಳಿಸಿದೆ.

ಬೆಂಗಳೂರು ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ನಡೆಸಿದ ಆರ್.ಸಿ.ಬಿ. ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಕ್ವಿಂಟಾನ್ ಡಿ’ಕಾಕ್ 29, ಬ್ರೆಂಡನ್ ಮೆಕಲಮ್ 38, ವಿರಾಟ್ ಕೊಹ್ಲಿ ಅಜೇಯ 68, ಮನ್ ದೀಪ್ ಸಿಂಗ್ 19, ಕಾಲಿನ್ ಡಿ ಗ್ರಾಂಡ್ ಹೋಂ ಅಜೇಯ 11 ರನ್ ಗಳಿಸಿದರು. ಕೋಲ್ಕತ್ತಾ ತಂಡದ ಪರವಾಗಿ ಆಂಡ್ರೆ ರೆಸಲ್ 3, ಕುಲದೀಪ್ ಯಾದವ್ 1 ವಿಕೆಟ್ ಪಡೆದರು.

176 ರನ್ ಗೆಲುವಿನ ಗುರಿ ಪಡೆದ ಕೋಲ್ಕತ್ತಾ ಪರವಾಗಿ ಕ್ರಿಸ್ ಲೈನ್ ಅಜೇಯ 62, ಸುನಿಲ್ ನರೇನ್ 27, ರಾಬಿನ್ ಉತ್ತಪ್ಪ 36, ನಿತೀಶ್ ರಾಣಾ 15, ದಿನೇಶ್ ಕಾರ್ತಿಕ್ 23 ರನ್ ಗಳಿಸಿದರು. 19.1 ಓವರ್ ಗಳಲ್ಲಿ 176 ರನ್ ಗಳಿಸಿದ್ದು, ಕೋಲ್ಕತ್ತಾ 6 ವಿಕೆಟ್ ಅಂತರದ ಜಯ ಗಳಿಸಿದೆ. ಆರ್.ಸಿ.ಬಿ. ಪರವಾಗಿ ಮುರುಗನ್ ಅಶ್ವಿನ್ 2, ಮೊಹಮ್ಮದ್ ಸಿರಾಜ್ 2 ವಿಕೆಟ್ ಪಡೆದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...