alex Certify
ಕನ್ನಡ ದುನಿಯಾ       Mobile App
       

Kannada Duniya

10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾನೆ ಕೊಹ್ಲಿ ಅಭಿಮಾನಿ

IndiaTvb849e7_kohli

ಕ್ರಿಕೆಟ್ ಅದರಲ್ಲೂ ಭಾರತ ತಂಡದ ಆಟಗಾರ ವಿರಾಟ್ ಕೊಹ್ಲಿ ಅಭಿಮಾನಿಯಾದ ತಪ್ಪಿ(?)ಗೆ ಈತ ದುಬಾರಿ ಬೆಲೆ ತೆತ್ತಿದ್ದಾನೆ. ಆಸ್ಟ್ರೇಲಿಯಾ ವಿರುದ್ದದ ಟಿ20 ಪಂದ್ಯದಲ್ಲಿ ಕೊಹ್ಲಿಯ ಬಿರುಸಿನ ಬ್ಯಾಟಿಂಗ್ ಕಾರಣ ಭಾರತ ವಿಜಯ ಸಾಧಿಸಿದ ವೇಳೆ ಖುಷಿ ತಡೆಯಲಾರದೆ ತನ್ನ ಮನೆಯ ಮೇಲೆ ಭಾರತದ ಧ್ವಜ ಹಾರಿಸಿದ್ದೇ ಈತ ಮಾಡಿದ ಮಹಾನ್ ಅಪರಾಧ.

ಹೌದು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ವಾಸವಾಗಿದ್ದ ವೃತ್ತಿಯಲ್ಲಿ ಟೈಲರ್ ಆಗಿರುವ 22 ವರ್ಷದ ಉಮರ್ ಡ್ರಾಜ್ ಈಗ 10 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾನೆ. ಕೊಹ್ಲಿಯ ಬಿರುಸಿನ ಬ್ಯಾಟಿಂಗ್ ಹಾಗೂ ಭಾರತದ ಜಯಕ್ಕೆ ಸಂಭ್ರಮಿಸಿದ್ದ ಉಮರ್, ತನ್ನ ಮನೆಯ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸಿದ್ದ.

ಈ ಕುರಿತು ಕೆಲವರು ಪೊಲೀಸರಿಗೆ ದೂರು ನೀಡಿದ್ದು, ಈತನನ್ನು ಬಂಧಿಸಿದ್ದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ವೇಳೆ ತಾನು ಕೊಹ್ಲಿ ಅಭಿಮಾನಿಯಾಗಿದ್ದು, ಈ ಕಾರಣಕ್ಕಾಗಿಯೇ ಭಾರತದ ಧ್ವಜ ಹಾರಿಸಿದ್ದಾಗಿ ಪರಿಪರಿಯಾಗಿ ಕೇಳಿಕೊಂಡರೂ ಆತನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿತ್ತು. ಆತನ ವಿರುದ್ದ ಹಾಕಲಾಗಿರುವ ಕಲಂ ಗಳ ಪ್ರಕಾರ ಈಗ 10 ವರ್ಷ ಜೈಲು ಶಿಕ್ಷೆಗೆ ಗುರಿಯಾಗಲಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...