alex Certify
ಕನ್ನಡ ದುನಿಯಾ       Mobile App
       

Kannada Duniya

ಅಭಿಮಾನಿ ಕೈನಲ್ಲಿದ್ದ ಮದುವೆ ಶುಭಾಶಯದ ಪೋಸ್ಟ್ ನೋಡಿ ಪ್ರತಿಕ್ರಿಯೆ ನೀಡಿದ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮದುವೆಯಾಗಿ ಎರಡು ತಿಂಗಳಾಗ್ತಾ ಬಂತು. ಮದುವೆ, ಹನಿಮೂನ್ ಮುಗಿಸಿ ಇಬ್ಬರೂ ತಮ್ಮ ತಮ್ಮ ಕೆಲಸಕ್ಕೆ ವಾಪಸ್ ಆಗಿದ್ದಾರೆ. ಆದ್ರೆ ಈಗ್ಲೂ ಕೊಹ್ಲಿ ಮತ್ತು ಅನುಷ್ಕಾರಿಗೆ ಮದುವೆ ಶುಭಾಶಯಗಳು ಬರುತ್ತಲೇ ಇವೆ.

ಭಾನುವಾರ ದಕ್ಷಿಣ ಆಫ್ರಿಕಾದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲೂ ಕೊಹ್ಲಿಗೆ ಅಭಿಮಾನಿಗಳು ಶುಭಕೋರಿದ್ದಾರೆ.  ಅಭಿಮಾನಿಯೊಬ್ಬರು ಅನುಷ್ಕಾ ಹಾಗೂ ಕೊಹ್ಲಿ ಮದುವೆ ಫೋಟೋ ಹಿಡಿದು ಮೈದಾನಕ್ಕೆ ಬಂದಿದ್ದರು. ಫೋಟೋ ಕೆಳಗೆ ಹ್ಯಾಪಿ ಮ್ಯಾರಿಡ್ ಲೈಫ್ ಎಂಬ ಸಂದೇಶವಿತ್ತು. ಮೈದಾನದಲ್ಲಿ ಫೀಲ್ಡ್ ಮಾಡ್ತಿದ್ದ ಕೊಹ್ಲಿ ಕಣ್ಣು ಆ ಕಡೆ ಹೋಗಿದೆ. ಕೈ ಎತ್ತಿ ಅಭಿಮಾನಿಗೆ ಕೊಹ್ಲಿ ಧನ್ಯವಾದ ಹೇಳಿದ್ದಾರೆ.

ಅನುಷ್ಕಾ ಸದ್ಯ ಶಾರುಕ್ ಜೊತೆ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾಳೆ. ಕೊಹ್ಲಿ ಆಟವನ್ನು ಮಿಸ್ ಮಾಡಿಕೊಳ್ಳದ ಅನುಷ್ಕಾ ಹಿಂದಿನ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿದಾಗ ಟ್ವೀಟರ್ ಮೂಲಕ ಶುಭಕೋರಿದ್ದಳು. ಕೊಹ್ಲಿ ಕೂಡ ಮೈದಾನದಲ್ಲಿ ಆಗಾಗ ಪ್ರೇಯಸಿ ನೆನಪು ಮಾಡುತ್ತಿರುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...