alex Certify
ಕನ್ನಡ ದುನಿಯಾ       Mobile App
       

Kannada Duniya

ಔಟಾದರೂ ನಗುತ್ತಾ ನಿಂತಿದ್ದ ಕೊಹ್ಲಿಗೆ ಬಿತ್ತು ಭಾರೀ ದಂಡ

virat kohli fine

ಭಾರತದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿಗೆ ಅಶಿಸ್ತು ತೋರಿದ ಕಾರಣಕ್ಕೆ ಬರೋಬ್ಬರಿ ದಂಡ ವಿಧಿಸಲಾಗಿದೆ. ಬಾಂಗ್ಲಾದೇಶದ ಮೀರ್ ಪುರ್ ನಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟಿ-20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಂಪೈರ್ ತೀರ್ಪಿಗೆ ಅಗೌರವ ತೋರಿದ್ದರು.

ಭಾರತದ ವಿರುದ್ಧದ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 83 ರನ್ ಗಳಿಸಿತ್ತು. 84 ರನ್ ಗಳ ಗೆಲುವಿನ ಗುರಿ ಪಡೆದ ಭಾರತ ಆರಂಭಿಕ ಆಘಾತ ಅನುಭವಿಸಿದರೂ ವಿರಾಟ್ ಕೊಹ್ಲಿ ಅವರ ಅಮೋಘ ಆಟದ ನೆರವಿನಿಂದ ಗೆಲುವು ಕಂಡಿತು. ಈ ಪಂದ್ಯದಲ್ಲಿ ಕೊಹ್ಲಿ 49 ರನ್ ಗಳಿಸಿದರು. 14ನೇ ಓವರ್ ನಲ್ಲಿ ವಿರಾಟ್ ಕೊಹ್ಲಿ ಎಲ್.ಬಿ.ಡಬ್ಲ್ಯೂ.ಗೆ ಔಟಾದರು. ಅಂಪೈರ್ ನೀಡಿದ ತೀರ್ಪಿನ ಬಗ್ಗೆ ಅಸಮಾಧಾನಗೊಂಡ ಕೊಹ್ಲಿ ವ್ಯಂಗ್ಯವಾಗಿ ನಗುತ್ತಾ ಮೈದಾನದಿಂದ ನಿಧಾನವಾಗಿ ಹೆಜ್ಜೆ ಹಾಕಿದ್ದಾರೆ.

ಐಸಿಸಿ ನಿಯಮದ ಪ್ರಕಾರ ಹೀಗೆ ಮಾಡಿದ್ದು ಅಶಿಸ್ತು ಎಂದು ಪರಿಗಣಿಸಿರುವ ಕ್ರಿಕೆಟ್ ಮಂಡಳಿ ವಿರಾಟ್ ಕೊಹ್ಲಿ ಅವರಿಗೆ ಪಂದ್ಯದ ಸಂಭಾವನೆಯ ಶೇ.30ರಷ್ಟು ದಂಡ ವಿಧಿಸಿದೆ. ಕೊಹ್ಲಿ ಬ್ಯಾಟಿಂಗ್ ಮಾಡುವಾಗ ಬಾಲ್ ಇನ್ ಸೈಡ್ ಎಡ್ಜ್ ಆಗಿತ್ತೆಂದು ಭಾವಿಸಿದ್ದರು. ಅದಕ್ಕೆ ಅಂಪೈರ್ ತೀರ್ಪಿನ ಬಗ್ಗೆ ಅಗೌರವ ತೋರಿದ್ದರು. ಹಾಗಾಗಿ ದಂಡ ವಿಧಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...