alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಾಟ್ ಕೊಹ್ಲಿ ಬೇಡಿಕೆಗೆ ಮಣಿದ ಬಿಸಿಸಿಐ…!?

ಟೀಂ ಇಂಡಿಯಾ ಆಟಗಾರರ ವೇತನ ಹೆಚ್ಚಳ ಮಾಡಬೇಕೆಂಬ ನಾಯಕ ವಿರಾಟ್ ಕೊಹ್ಲಿ ಹಾಗೂ ಮಹೇಂದ್ರ ಸಿಂಗ್ ಧೋನಿ ಬೇಡಿಕೆಗೆ ಬಿಸಿಸಿಐ ಸಮ್ಮತಿಸಿದೆ. ಬಿಸಿಸಿಐ ಆಡಳಿತ ಸಮಿತಿ ಈ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರಕ್ಕೆ ಬರುವುದಾಗಿ ತಿಳಿಸಿದೆ.

ಈ ಸಂಬಂಧ ಕೊಹ್ಲಿ, ಧೋನಿ ಹಾಗೂ ಕೋಚ್ ರವಿಶಾಸ್ತ್ರಿ, ಬಿಸಿಸಿಐ ಆಡಳಿತ ಸಮಿತಿ ಮುಖ್ಯಸ್ಥರಾದ ವಿನೋದ್ ರೈ, ಡಯಾನಾ ಎಡುಲ್ಜಿ ಮತ್ತು ಸಿಇಓ ರಾಹುಲ್ ಜೊಹ್ರಿ ಅವರನ್ನು ಭೇಟಿ ಮಾಡಿದ್ದಾರೆ. ಬಿಸಿಸಿಐ ಆದಾಯದಲ್ಲಿ ಬಹುಪಾಲನ್ನು ಆಟಗಾರರಿಗೆ ಹಂಚಬೇಕೆಂದು ಕೊಹ್ಲಿ ಬೇಡಿಕೆ ಇಟ್ಟಿದ್ದಾರೆ.

ಈ ಎಲ್ಲಾ ವಿಚಾರಗಳ ಬಗ್ಗೆ ಸುಮಾರು 2 ಗಂಟೆಗಳ ಕಾಲ ಚರ್ಚೆ ನಡೆದಿದೆ. ಒಂದಾದ ಮೇಲೊಂದರಂತೆ ಕ್ರಿಕೆಟ್ ಸರಣಿಗಳನ್ನು ಆಯೋಜಿಸುತ್ತಿರುವುದರಿಂದ ಆಟಗಾರರಿಗೆ ವಿಶ್ರಾಂತಿ ಸಿಗುತ್ತಿಲ್ಲ ಎಂಬುದನ್ನೂ ಕೊಹ್ಲಿ ಬಿಸಿಸಿಐ ಗಮನಕ್ಕೆ ತಂದಿದ್ದಾರೆ. ಸದ್ಯ ಗ್ರೇಡ್ ಎ ಆಟಗಾರರಿಗೆ ಬಿಸಿಸಿಐ ವಾರ್ಷಿಕ 2 ಕೋಟಿ ರೂಪಾಯಿ ವೇತನ ನೀಡುತ್ತಿದೆ.

ಗ್ರೇಡ್ ಬಿ ಆಟಗಾರರಿಗೆ 1 ಕೋಟಿ ಹಾಗೂ ಗ್ರೇಡ್ ಸಿ ಆಟಗಾರರಿಗೆ 50 ಲಕ್ಷ ರೂಪಾಯಿ ನೀಡಲಾಗುತ್ತಿದೆ. ಆಡುವ 11ರ ಬಳಗದ ಆಟಗಾರರಿಗೆ ಒಂದು ಟೆಸ್ಟ್ ಪಂದ್ಯಕ್ಕೆ ತಲಾ 15 ಲಕ್ಷ, ಏಕದಿನ ಪಂದ್ಯಕ್ಕೆ 6 ಹಾಗೂ ಟಿ-20 ಗೆ 3 ಲಕ್ಷ ರೂಪಾಯಿ ಸಂಭಾವನೆ ಸಿಗುತ್ತಿದೆ. ಉಳಿದ ಆಟಗಾರರಿಗೆ ಇದರ ಅರ್ಧದಷ್ಟು ಮೊತ್ತವನ್ನು ಬಿಸಿಸಿಐ ನೀಡುತ್ತಿದೆ. ಟೀಂ ಇಂಡಿಯಾ ತರಬೇತುದಾರರಾಗಿದ್ದ ಸಂದರ್ಭದಲ್ಲಿ ಅನಿಲ್ ಕುಂಬ್ಳೆ ಕೂಡ ಆಟಗಾರರ ವೇತನ ಹೆಚ್ಚಳ ಮಾಡಬೇಕೆಂದು ಬಿಸಿಸಿಐ ಅನ್ನು ಒತ್ತಾಯಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...