alex Certify
ಕನ್ನಡ ದುನಿಯಾ       Mobile App
       

Kannada Duniya

ನಟಿ ನಿಧಿ ಸಂಬಂಧದ ಬಗ್ಗೆ ಕ್ರಿಕೆಟರ್ ಕೆ. ಎಲ್. ರಾಹುಲ್ ಹೇಳಿದ್ದೇನು?

ಕ್ರಿಕೆಟರ್ ಕೆ.ಎಲ್.ರಾಹುಲ್ ಒಳ್ಳೆ ಫಾರ್ಮ್ನಲ್ಲಿದ್ದಾರೆ. ಸದ್ಯ ಐಪಿಎಲ್ ಮುಗಿಸಿರುವ ರಾಹುಲ್ ಇನ್ನೊಂದು ವಿಚಾರಕ್ಕೆ ಸುದ್ದಿಗೆ ಬಂದಿದ್ದಾರೆ. ರಾಹುಲ್ ಬಾಲಿವುಡ್ ಬೆಡಗಿ ನಿಧಿ ಅಗರ್ವಾಲ್ ಜೊತೆ ಡೇಟಿಂಗ್ ಮಾಡ್ತಿದ್ದಾರೆಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡ್ತಿದೆ. ನಿಧಿ ಹಾಗೂ ತನ್ನ ಸಂಬಂಧದ ಬಗ್ಗೆ ರಾಹುಲ್ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

ಎನ್ಡಿಟಿವಿ ಜೊತೆ ಮಾತನಾಡಿದ ರಾಹುಲ್, ಮಾಧ್ಯಮಗಳಲ್ಲಿ ಹರಿದಾಡ್ತಿರುವ ಸುದ್ದಿ ಸುಳ್ಳು ಎಂದಿದ್ದಾರೆ. ನನಗೆ ಹುಡುಗಿ ಇಷ್ಟವಾದ್ರೆ ಮೊದಲು ಮಾಧ್ಯಮಗಳಿಗೆ ಹೇಳ್ತೇನೆ. ನನಗಿಷ್ಟವಾಗುವ ಹುಡುಗಿಯನ್ನು ರಾಜಕುಮಾರಿಯಂತೆ ನೋಡಿಕೊಳ್ತೇನೆ. ಅದ್ರಲ್ಲಿ ಮುಚ್ಚಿಡುವ ಸಂಗತಿ ಏನಿಲ್ಲ ಎಂದಿದ್ದಾರೆ.

ನಿಧಿ ಹಾಗೂ ನಾನು ತುಂಬಾ ವರ್ಷಗಳಿಂದ ಪರಿಚಿತರು. ಡಿನ್ನರ್ ಗೆ ನಾನು ನಿಧಿ ಇಬ್ಬರೇ ಹೋಗಿರಲಿಲ್ಲ. ನಮ್ಮ ಜೊತೆ ಬೆಂಗಳೂರಿನ ಕೆಲ ಸ್ನೇಹಿತರಿದ್ದರು ಎಂದು ರಾಹುಲ್ ಹೇಳಿದ್ದಾರೆ. ಕಿಂಗ್ಸ್ ಇಲವೆನ್ ಪಂಜಾಬ್ ತಂಡದಲ್ಲಿ ಮಿಂಚಿದ್ದ ರಾಹುಲ್ ಜುಲೈ 3 ರಿಂದ ನಡೆಯುವ ಇಂಗ್ಲೆಂಡ್ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...