alex Certify
ಕನ್ನಡ ದುನಿಯಾ       Mobile App
       

Kannada Duniya

ಕನ್ನಡಿಗನ ದಾಖಲೆಯ ಸಮಕ್ಕೆ ನಿಂತ ಇನ್ನೋರ್ವ ಕನ್ನಡಿಗ

ಓವಲ್ ಅಂಗಳದಲ್ಲಿ ಟೀಮ್ ಇಂಡಿಯಾ-ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಆಡುತ್ತಿದೆ. ಈ ಪಂದ್ಯದಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಇನ್ನೋರ್ವ ಕನ್ನಡಿಗ ರಾಹುಲ್ ದ್ರಾವಿಡ್ ಅವರ ದಾಖಲೆಯ ಸಮಕ್ಕೆ ಬಂದು ನಿಂತಿದ್ದಾರೆ.

ಬ್ಯಾಟಿಂಗ್ ನಲ್ಲಿ ಕಳಪೆ ಫಾರ್ಮ್ ನಿಂದ ಬಳಲುತ್ತಿರುವ ರಾಹುಲ್, ಫೀಲ್ಡಿಂಗ್ ನಲ್ಲಿ ಕಮಾಲ್ ನ ಪ್ರದರ್ಶನ ನೀಡಿದ್ದಾರೆ. ಟೀಮ್ ಇಂಡಿಯಾದ ಪ್ರಮುಖ ಸ್ಲಿಪ್ ಫೀಲ್ಡರ್ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವ ರಾಹುಲ್, ಇಂಗ್ಲೆಂಡ್ ಪ್ರವಾಸದಲ್ಲಿ ಉತ್ತಮ ಕ್ಯಾಚ್ ಪಡೆದು ಬೀಗಿದ್ದಾರೆ.

ರಾಹುಲ್ ದ್ರಾವಿಡ್ ಸ್ಲಿಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿ ದಾಖಲೆಯ ಕ್ಯಾಚ್ ಗಳನ್ನು ಪಡೆದು ಅಬ್ಬರಿಸಿದ್ದಾರೆ. ಇನ್ನು 2004 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ರಾಹುಲ್ 13 ಕ್ಯಾಚ್ ಪಡೆದು ದಾಖಲೆಯನ್ನು ನಿರ್ಮಿಸಿದ್ದರು. ಇಂಗ್ಲೆಂಡ್ ಪ್ರವಾಸದಲ್ಲೂ ಟೀಮ್ ಇಂಡಿಯಾದ ಸ್ಟಾರ್ ಪ್ಲೇಯರ್ ಕೆ.ಎಲ್. ರಾಹುಲ್ 5ನೇ ಟೆಸ್ಟ್ ಪಂದ್ಯದ ವೇಳೆ, ಈ ಸಾಧನೆಯನ್ನು ಸಮಗಟ್ಟಿದ್ದಾರೆ.

5ನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ನ ಸ್ಟುವರ್ಟ್ ಬ್ರಾಡ್ ಅವರಿಗೆ ರವೀಂದ್ರ ಜಡೇಜಾ ಖೆಡ್ಡಾ ತೋಡಿದ್ರು. ಲೆಂಥ್ ಬೌಲ್ ಅನ್ನು ತಪ್ಪಾಗಿ ಗುರುತಿಸಿದ ಬ್ರಾಡ್, ರಾಹುಲ್ ಗೆ ಕ್ಯಾಚ್ ನೀಡಿದ್ರು. ಈ ಮೂಲಕ ರಾಹುಲ್ ಸರಣಿಯಲ್ಲಿ ಅಧಿಕ ಕ್ಯಾಚ್ ಗಳನ್ನು ಪಡೆದ ದ್ರಾವಿಡ್ ಸಾಧನೆ ಸಮಕ್ಕೆ ನಿಂತಿದ್ದಾರೆ. ರಾಹುಲ್ ಎರಡನೇ ಇನ್ನಿಂಗ್ಸ್ ನಲ್ಲಿ ಇನ್ನೊಂದು ಕ್ಯಾಚ್ ಪಡೆದಿದ್ದೇ ಆದಲ್ಲಿ ದ್ರಾವಿಡ್ ದಾಖಲೆ ಅಳಿಸಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...