alex Certify
ಕನ್ನಡ ದುನಿಯಾ       Mobile App
       

Kannada Duniya

ಟಿ -20 ಫೈನಲ್: ರೋಚಕ ಪಂದ್ಯದಲ್ಲಿ ಹಲವು ದಾಖಲೆ

ಕೊಲಂಬೊ: ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಟಿ -20 ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ ಭರ್ಜರಿ ಜಯಗಳಿಸಿದೆ. ಗೆಲುವಿಗೆ 167 ರನ್ ಗುರಿ ಪಡೆದ ಭಾರತ, ಕೊನೆಯ ಹಂತದಲ್ಲಿ ಸೋಲಿನ ಸುಳಿಗೆ ಸಿಲುಕಿತ್ತು.

ಕೊನೆಯ 2 ಓವರ್ ಗಳಲ್ಲಿ 34 ರನ್ ಗಳಿಸಬೇಕಿದ್ದ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದು ದಿನೇಶ್ ಕಾರ್ತಿಕ್. ಕೇವಲ 8 ಎಸೆತಗಳಲ್ಲಿ 3 ಸಿಕ್ಸರ್, 2 ಬೌಂಡರಿಯೊಂದಿಗೆ ಅಜೇಯ 29 ರನ್ ಗಳಿಸಿದ ದಿನೇಶ್ ಕಾರ್ತಿಕ್ ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ಗೆಲುವು ತಂದು ಕೊಟ್ಟಿದ್ದಾರೆ. ಕೊನೆಯ ಬಾಲ್ ನಲ್ಲಿ 5 ರನ್ ಗಳಿಸಬೇಕಿದ್ದ ಆತಂಕದಲ್ಲಿದ್ದ ಭಾರತಕ್ಕೆ ದಿನೇಶ್ ಕಾರ್ತಿಕ್ ಬಾರಿಸಿದ ಸಿಕ್ಸರ್ ಯುಗಾದಿ ಉಡುಗೊರೆ ನೀಡಿದೆ.

ತ್ರಿಕೋನ ಟಿ -20 ಸರಣಿಯ ಫೈನಲ್ ನಲ್ಲಿ ಭರ್ಜರಿ ಜಯಗಳಿಸಿದ ಭಾರತ, ಸತತ 3 ಟಿ -20 ಸರಣಿಯನ್ನು ಜಯಿಸಿದೆ. ವಿಶ್ವದ ಯಾವ ತಂಡವೂ 3 ಟಿ -20 ಸರಣಿ ಫೈನಲ್ ಪಂದ್ಯವನ್ನು ಜಯಿಸಿಲ್ಲ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಆ ಸಾಧನೆ ಮಾಡಿದೆ.

ಟಿ -20 ಫೈನಲ್ ನಲ್ಲಿ ಅತಿಹೆಚ್ಚು ಮೊತ್ತದ ಗುರಿಯನ್ನು ಯಶಸ್ವಿಯಾಗಿ ಮುಟ್ಟಿದ ಸಾಧನೆಯನ್ನು ಭಾರತ ತಂಡ ಮಾಡಿದೆ. ಕೋಲ್ಕತ್ತದಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ ಟಿ -20 ವಿಶ್ವಕಪ್ ಫೈನಲ್ ನಲ್ಲಿ ವೆಸ್ಟ್ ಇಂಡೀಸ್ 156 ರನ್ ಗೆಲುವಿನ ಗುರಿ ಪಡೆದು ಜಯ ಸಾಧಿಸಿತ್ತು. ಕೊಲಂಬೊದಲ್ಲಿ ನಡೆದ ನಿಡದಾಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ 167 ರನ್ ಗಳಿಸಿ ಭಾರತ ತಂಡ ದಾಖಲೆ ನಿರ್ಮಿಸಿದೆ. ಕೊನೆಯ ಬಾಲ್ ನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ರನ್ ಬೇಕಾದಾಗ ಸಿಕ್ಸರ್ ಸಿಡಿಸಿದ ದಿನೇಶ್ ಕಾರ್ತಿಕ್ ಇಂತಹ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಇನ್ನು ರೋಹಿತ್ ಶರ್ಮಾ ಟಿ -20 ಯಲ್ಲಿ 7000 ರನ್ ಪೂರೈಸಿದ 3 ನೇ ಆಟಗಾರ ಹಾಗೂ ಫೈನಲ್ ಪಂದ್ಯದಲ್ಲಿ ಅರ್ಧಶತಕ ಗಳಿಸಿದ 4 ನೇ ಆಟಗಾರನಾಗಿದ್ದಾರೆ. ಕೆ.ಎಲ್. ರಾಹುಲ್ ಕೇವಲ 13 ಇನ್ನಿಂಗ್ಸ್ ಗಳಲ್ಲಿ 500 ರನ್ ಪೂರೈಸಿದ್ದಾರೆ. ವಾಷಿಂಗ್ಟನ್ ಸುಂದರ್ ಲಂಕಾದಲ್ಲಿ ನಡೆದ ಟಿ -20 ಸರಣಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ, ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...