alex Certify
ಕನ್ನಡ ದುನಿಯಾ       Mobile App
       

Kannada Duniya

49 ಕ್ಕೆ ಆಲ್ ಔಟ್: ಆರ್.ಸಿ.ಬಿ.ಗೆ ಹೀನಾಯ ಸೋಲು

kkr-crb-rcb

ಕೋಲ್ಕತ್ತ: ಇಲ್ಲಿನ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ, ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹೀನಾಯ ಸೋಲು ಕಂಡಿದೆ.

132 ಗೆಲುವಿನ ಗುರಿ ಪಡೆದ ಆರ್.ಸಿ.ಬಿ. ಕೇವಲ 49 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು 82 ರನ್ ಗಳ ಅಂತರದಿಂದ ಹೀನಾಯವಾಗಿ ಸೋತಿದೆ.

ಮೊದಲಿಗೆ ಬ್ಯಾಟಿಂಗ್ ಮಾಡಿದ ಕೋಲ್ಕತ್ತ ನೈಟ್ ರೈಡರ್ಸ್ 19.3 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 131 ರನ್ ಗಳಿಸಿತು.

ಸುನಿಲ್ ನರೈನ್ 34, ಗೌತಮ್ ಗಂಭೀರ್ 14, ಮನೀಶ್ ಪಾಂಡೆ 15, ಸೂರ್ಯ ಕುಮಾರ್ 15, ಕ್ರಿಸ್ ವೋಕ್ಸ್ 18 ರನ್ ಗಳಿಸಿದರು. ಆರ್.ಸಿ.ಬಿ 9.4 ಓವರ್ ಗಳಲ್ಲಿ 49 ರನ್ ಗಳಿಸುವಷ್ಟರಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತು.

ಕೇದಾರ್ ಜಾಧವ್ 9, ಸ್ಟುವರ್ಟ್ ಬಿನ್ನಿ 8, ಎ.ಬಿ. ಡಿ’ವಿಲಿಯರ್ಸ್ 8 ರನ್ ಗಳಿಸಿದ್ದಾರೆ. ಕೆ.ಕೆ.ಆರ್. ಪರವಾಗಿ ಕಾಲ್ಟರ್ ನೈಲ್, ವೋಕ್ಸ್, ಗ್ರ್ಯಾಂಡ್ ಹೋಮ್ ತಲಾ 3 ವಿಕೆಟ್ ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...