alex Certify
ಕನ್ನಡ ದುನಿಯಾ       Mobile App
       

Kannada Duniya

ಮೈದಾನಕ್ಕೆ ಜಿಗಿದ ಹುಡುಗಿ….ಓಡಿ ಹೋಗಿ ಕ್ರಿಕೆಟರ್ ಗೆ ಕಿಸ್ ಕೊಟ್ಲು….

ವಿಶ್ವ ಕ್ರಿಕೆಟ್ ನಲ್ಲಿ ಎರಡೇ ಬಾರಿ ಇಂಥ ಘಟನೆ ನಡೆದಿದೆ. ಮೈದಾನಕ್ಕೆ ಬಂದ ಹುಡುಗಿ ಕ್ರಿಕೆಟರ್ ಗೆ ಎಲ್ಲರ ಮುಂದೆ ಕಿಸ್ ಕೊಟ್ಟಿದ್ದಾಳೆ. ವಿಶೇಷವೆಂದ್ರೆ ಎರಡೂ ಕಿಸ್ ಭಾರತೀಯ ಬ್ಯಾಟ್ಸ್ ಮನ್ ಗಳಿಗೆ ಸಿಕ್ಕಿದೆ.

ಅದು 60ರ ದಶಕದ ಸುದ್ದಿ. ಅಬ್ಬಾಸ್ ಅಲಿ ಅತ್ಯಂತ ಸುಂದರ ಕ್ರಿಕೆಟರ್ ಆಗಿದ್ದರು. ಹುಡುಗಿಯರು ಅಬ್ಬಾಸ್ ಅಲಿ ಗುಂಗಿನಲ್ಲಿರುತ್ತಿದ್ದರು. ಎಲ್ಲಿ ಹೋದ್ರೂ ಅಬ್ಬಾಸ್ ನೋಡಲು ಹುಡುಗಿಯರು ಮುಗಿ ಬೀಳ್ತಿದ್ದರು.

1960 ರಲ್ಲಿ ಮುಂಬೈ ಮೈದಾನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಮೂರನೇ ಟೆಸ್ಟ್ ಪಂದ್ಯವನ್ನಾಡ್ತಾಯಿತ್ತು. ಪಂದ್ಯದ ಕೊನೆಯ ದಿನದ ಆಟ ಶುರುವಾಗಿತ್ತು. ಅಬ್ಬಾಸ್ ಅಲಿ ವಿರಾಮದ ವೇಳೆಗೆ ಅರ್ಧ ಶತಕ ಪೂರೈಸಿದ್ದರು. ಎರಡನೇ ಇನ್ನಿಂಗ್ಸ್ ನಲ್ಲಿ ಕೂಡ ಅಬ್ಬಾಸ್ ಅರ್ಧ ಶತಕ ಸಿಡಿಸಿದ್ರು. ಎಲ್ಲಿಂದಲೋ ಮೈದಾನಕ್ಕೆ ಧುಮುಕಿದ ಹುಡುಗಿ ಅಬ್ಬಾಸ್ ಬಳಿ ಓಡಿ ಬಂದ್ಲು. ಅಬ್ಬಾಸ್ ಎಳೆದುಕೊಂಡು ಕೆನ್ನೆಗೆ ಮುತ್ತಿಟ್ಟಳು. ಇಡೀ ವಿಶ್ವವೇ ಇದನ್ನು ನಿಬ್ಬೆರಗಾಗಿ ನೋಡ್ತಿತ್ತು.

ಅಬ್ಬಾಸ್ ಅಭಿಮಾನಿ ಮುತ್ತು ವಿಶ್ವವೇ ಮಾತಾಡುವಂತೆ ಮಾಡಿತ್ತು. ಹೈದ್ರಾಬಾದ್ ನಿವಾಸಿ ಅಬ್ಬಾಸ್ ಲಂಡನ್ ನ ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾಭ್ಯಾಸ ಮುಗಿಸಿದ್ದರು. ಮೊದಲ ಟೆಸ್ಟ್ ಪಂದ್ಯದಲ್ಲಿಯೇ ಅಬ್ಬಾಸ್ ಶತಕ ಸಿಡಿಸಿದ್ದರು. ಆದ್ರೆ ನಂತ್ರದ ದಿನಗಳಲ್ಲಿ ಕ್ರಿಕೆಟ್ ಕೈ ಹತ್ತಲಿಲ್ಲ. ಆಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್ ಭಾರತದ ಪಾಲಾಯ್ತು ನಿಜ. ಆದ್ರೆ ಹುಡುಗಿ ಮುತ್ತಿನ ನಂತ್ರ ಅಬ್ಬಾಸ್ ಏಳ್ಗೆ ಕಾಣಲಿಲ್ಲ. 10 ಟೆಸ್ಟ್ ಗಷ್ಟೇ ಅವರು ಸೀಮಿತವಾದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...