alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿಗೆ ಕಾರಣವಾಗಿದೆ ಕಿಂಗ್ಸ್ XI ಪಂಜಾಬ್ ತಂಡದ ನಿರ್ಧಾರ

ಮುಂಬರುವ ಐಪಿಎಲ್ ಪಂದ್ಯಾವಳಿಗಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ತನ್ನ ತಂಡದ ನಾಯಕನನ್ನಾಗಿ ರವಿಚಂದ್ರನ್ ಅಶ್ವಿನ್ ರನ್ನು ಆಯ್ಕೆ ಮಾಡುವ ಮೂಲಕ ಅಚ್ಚರಿಗೆ ಕಾರಣವಾಗಿದೆ. ಯುವರಾಜ್ ಸಿಂಗ್ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆಂಬ ನಿರೀಕ್ಷೆ ಇದರಿಂದ ಹುಸಿಯಾಗಿದೆ.

ಸೋಮವಾರದಂದು ಕಿಂಗ್ಸ್ ಇಲೆವೆನ್ ತಂಡದ ಮೆಂಟರ್ ವೀರೇಂದ್ರ ಸೆಹ್ವಾಗ್, ಅಶ್ವಿನ್ ರ ಆಯ್ಕೆಯನ್ನು ಪ್ರಕಟಿಸಿದ್ದಾರೆ. ಐಪಿಎಲ್ ನ ಬಹುತೇಕ ತಂಡಗಳು ತಮ್ಮ ತಂಡದ ನಾಯಕನನ್ನಾಗಿ ಬ್ಯಾಟ್ಸ್ ಮನ್ ಗಳನ್ನೇ ಆಯ್ಕೆ ಮಾಡಿಕೊಂಡಿರುವ ಮಧ್ಯೆ ಕಿಂಗ್ಸ್ ಇಲೆವೆನ್ ತಂಡ ಬೌಲರ್ ಒಬ್ಬರನ್ನು ನಾಯಕನನ್ನಾಗಿ ಆಯ್ಕೆ ಮಾಡಿಕೊಂಡಿರುವುದು ಅಚ್ಚರಿ ಮೂಡಿಸಿದೆ.

ಆದರೆ ಇದಕ್ಕೆ ಸಮಜಾಯಿಷಿಯನ್ನೂ ನೀಡಿರುವ ವೀರೇಂದ್ರ ಸೆಹ್ವಾಗ್, ಈ ಹಿಂದೆ ಬೌಲರ್ ಗಳಾದ ಕಪಿಲ್ ದೇವ್, ವಾಸೀಂ ಅಕ್ರಮ್, ವಕಾರ್ ಯೂನಸ್ ಮೊದಲಾದವರು ತಮ್ಮ ತಮ್ಮ ತಂಡಗಳನ್ನು ಸಮರ್ಥವಾಗಿ ಮುನ್ನಡೆಸಿದ್ದಾರೆ. ರವಿಚಂದ್ರನ್ ಅಶ್ವಿನ್ ಕೂಡಾ ಇದರಲ್ಲಿ ಯಶಸ್ವಿಯಾಗುತ್ತಾರೆಂಬ ವಿಶ್ವಾಸವಿದೆ ಎಂದಿದ್ದಾರೆ. ಕಳೆದೆರೆಡು ಐಪಿಎಲ್ ಪಂದ್ಯಾವಳಿಗಳಲ್ಲಿ ನಿಷೇಧಕ್ಕೊಳಗಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತೆ ಮರಳಿದ್ದು, ಐಪಿಎಲ್ ಹಣಾಹಣಿ ಈ ಬಾರಿ ಮತ್ತಷ್ಟು ರೋಚಕವಾಗಿರಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...