alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಡ್ಮಿಂಟನ್ ನಲ್ಲಿ ನನಸಾಗದ ಪದಕದ ಕನಸು

Srikanth Kidambi, of India, returns a shot to Lin Dan, of China, during a men's singles quarterfinal badminton match at the 2016 Summer Olympics in Rio de Janeiro, Brazil, Wednesday, Aug. 17, 2016. (AP Photo/Kin Cheung)ರಿಯೋ ಒಲಿಂಪಿಕ್ಸ್ ನ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಭಾರತಕ್ಕೆ ನಿರಾಸೆಯಾಗಿದೆ. ಪದಕದ ಕನಸು ಕಮರಿದೆ. ಬ್ಯಾಡ್ಮಿಂಟನ್ ಪುರುಷರ ಸಿಂಗಲ್ಸ್ ಕ್ವಾರ್ಟರ್ ಫೈನಲ್ ನಲ್ಲಿ ಭಾರತದ ಶ್ರೀಕಾಂತ್ ಸೋಲು ಅನುಭವಿಸಿದ್ದಾರೆ.

ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ಚೀನಾದ ಲಿನ್ ಡಾನ್, ಶ್ರೀಕಾಂತ್ ರನ್ನು ಮಣಿಸಿದ್ದಾರೆ. ವಿಶ್ವದ 11ನೇ ಶ್ರೇಯಾಂಕಿತ ಆಟಗಾರ ಶ್ರೀಕಾಂತ್, 21-6, 11-21, 21-18ರಿಂದ ಸೋಲು ಅನುಭವಿಸಿದ್ರು.

ಸೆಮಿಫೈನಲ್ ನಲ್ಲಿ ಲಿನ್ ಡಾನ್, ಮಲೇಷಿಯಾದ ಲೀ ಚೂಂಗ್ ವೀ ಅವರನ್ನು ಎದುರಿಸಲಿದ್ದಾರೆ. ಆದ್ರೆ ಕ್ವಾರ್ಟರ್ ಫೈನಲ್ ನಲ್ಲಿ ತಮ್ಮ ಪ್ರದರ್ಶನದಿಂದ ಲಿನ್ ಡಾನ್ ತೃಪ್ತರಾಗಿಲ್ಲ. ಇದೇ ಮೊದಲ ಬಾರಿಗೆ ಶ್ರೀಕಾಂತ್ ಒಲಿಂಪಿಕ್ಸ್ ನಲ್ಲಿ ಆಡುತ್ತಿದ್ದು, ಲಿನ್ ಡಾನ್ ಗೆ ಭಾರೀ ಪೈಪೋಟಿ ಒಡ್ಡಿದ್ದರು. ಅನ್ ಫೋರ್ಸ್ಡ್ ಎರರ್ ಗಳಿಂದಾಗಿ ಶ್ರೀಕಾಂತ್ ಪಂದ್ಯವನ್ನು ಕೈಚೆಲ್ಲಬೇಕಾಯ್ತು. ಶ್ರಿಕಾಂತ್ ಸೋಲಿನಿಂದಾಗಿ ಭಾರತದ ಪದಕದ ಆಸೆಗೆ ತಣ್ಣೀರೆರಚಿದಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...