alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ ಹರಾಜಿಗೂ ಮುನ್ನ ಇದನ್ನು ತಿಳಿದುಕೊಳ್ಳಿ

ipl_umf0h8z

ಇಂಡಿಯನ್ ಪ್ರೀಮಿಯರ್ ಲೀಗ್ ಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಸೋಮವಾರ ಬೆಂಗಳೂರಿನಲ್ಲಿ ನಡೆಯಲಿದೆ. ಹರಾಜು ಪಟ್ಟಿಯಲ್ಲಿ ಮೊದಲು 799 ಆಟಗಾರರಿದ್ದರು. ಆದ್ರೀಗ ಅಂತಿಮ ಪಟ್ಟಿ ಸಿದ್ಧವಾಗಿದೆ. ಐಪಿಎಲ್ 10ನೇ ಸೀಸನ್ ಗಾಗಿ 351 ಆಟಗಾರರ ಹರಾಜು ನಡೆಯಲಿದೆ.

ಸೋಮವಾರ ನಡೆಯುವ ಹರಾಜು ಪ್ರಕ್ರಿಯೆಯಲ್ಲಿ 226 ಆಟಗಾರರು ಭಾರತೀಯರಾಗಿದ್ದು, 122 ಆಟಗಾರರು ಅಂತರಾಷ್ಟ್ರೀಯ ಆಟಗಾರರಾಗಿದ್ದಾರೆ. ಫ್ರ್ಯಾಂಚೈಸಿಗಳು ತಮಗಿಷ್ಟವಾಗುವ ಆಟಗಾರರನ್ನು ಆಯ್ಕೆ ಮಾಡಲಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್ ಬಳಿ 23,35 ಕೋಟಿ ರೂಪಾಯಿ ಇದೆ. ಡೆಲ್ಲಿ ಡೇರ್ ಡೆವಿಲ್ಸ್ ಬಳಿ 21.5 ಕೋಟಿ ರೂ., ಸನ್ ರೈಸರ್ಸ್ ಬಳಿ 20.9 ಕೋಟಿ ರೂಪಾಯಿಯಿದೆ. ಕೋಲ್ಕತಾ ನೈಟ್ ರೈಡರ್ಸ್ ಬಳಿ 19.75 ಕೋಟಿ ರೂ. ಹಾಗೂ ರೈಸಿಂಗ್ ಪುಣೆ ಬಳಿ  19.1 ಕೋಟಿ ರೂ., ಗುಜರಾತ್ ಲಯನ್ಸ್ ಬಳಿ 14,35 ಕೋಟಿ ರೂ. ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಿ 12.82 ಕೋಟಿ ರೂಪಾಯಿಯಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...