alex Certify
ಕನ್ನಡ ದುನಿಯಾ       Mobile App
       

Kannada Duniya

ಕಾರು ಅಪಘಾತದಲ್ಲಿ ಮೃತಪಟ್ಟ ಖ್ಯಾತ ಅಥ್ಲೀಟ್

ಕೀನ್ಯಾದ ಖ್ಯಾತ ಅಂತಾರಾಷ್ಟ್ರೀಯ ಅಥ್ಲೀಟ್ ನಿಕೋಲಸ್ ಬೆಟ್ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. 2015ರಲ್ಲಿ ನಡೆದ ವಿಶ್ವ 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗೆದ್ದಿದ್ದ ನಿಕೋಲಸ್ ಬೆಟ್ ಪಶ್ಚಿಮ ಕೀನ್ಯಾದಲ್ಲಿ ನಡೆದ ದುರಂತದಲ್ಲಿ ಸಾವಿಗೀಡಾಗಿದ್ದಾರೆ.

ಮನೆಯ ಮುಂದೆ ಅಪಘಾತ ಸಂಭವಿಸಿದ್ದು, ಬೆಟ್ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ನಿಯಂತ್ರಣ ಕಳೆದುಕೊಂಡ ಬೆಟ್ ಕಾರು ಪಲ್ಟಿಯಾಗಿದ್ದರಿಂದ ತೀವ್ರವಾಗಿ ಗಾಯಗೊಂಡ ಪರಿಣಾಮ ಬೆಟ್ ಸಾವನ್ನಪ್ಪಿದ್ದಾರೆ.

28ರ ವರ್ಷದ ನಿಕೋಲಸ್ ಬೆಟ್ ಅವಳಿ ಮಕ್ಕಳ ತಂದೆಯಾಗಿದ್ದು, ನಿಕ್ ಅವರ ಸೋದರ ಕೂಡ ಅಂತಾರಾಷ್ಟ್ರೀಯ ಮಟ್ಟದ ಅಥ್ಲೀಟ್ ಆಗಿದ್ದಾರೆ. 2016 ರ ರಿಯೋ ಒಲಂಪಿಕ್ಸ್ ಪಂದ್ಯದ ವೇಳೆ ನಿಕೋಲಸ್ ಗಾಯಗೊಂಡರು. ಆನಂತರದಲ್ಲಿ ಅವರು ಚೇತರಿಸಿಕೊಳ್ಳೋದೇ ಕಷ್ಟವಾಯ್ತು. 2017 ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ನಿಕ್ ಚಾಂಪಿಯನ್ ಶಿಪ್ ಪಟ್ಟ ಕಾಯ್ದುಕೊಳ್ಳಲಿಲ್ಲ. ಆನಂತರದ ಹಲವು ಕ್ರೀಡಾಕೂಟಗಳಿಂದಲೂ ನಿಕ್ ಹೊರಬೀಳಬೇಕಾಯ್ತು. ನಿಕೋಲಸ್ ಸಾವಿಗೆ ಕೀನ್ಯಾದ ಕ್ರೀಡಾ ಇಲಾಖೆ ಸಂತಾಪ ಸೂಚಿಸಿದ್ದು, ನಿಕ್ ಆತ್ಮಕ್ಕೆ ಶಾಂತಿ ಕೋರಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...