alex Certify
ಕನ್ನಡ ದುನಿಯಾ       Mobile App
       

Kannada Duniya

ಹರಾಜಾಗ್ತಿದೆ ಭಾರತಕ್ಕೆ ಸಿಕ್ಕ ಮೊದಲ ಒಲಿಂಪಿಕ್ಸ್ ಪದಕ !

medal

ಖಶಬ ದಾದಾಸಾಹೇಬ್ ಜಾಧವ್ ಭಾರತಕ್ಕೆ ಮೊಟ್ಟ ಮೊದಲ ಒಲಿಂಪಿಕ್ಸ್ ಪದಕ ಗೆದ್ದು ಕೊಟ್ಟಿದ್ರು. 1952ರಲ್ಲಿ ಹೆಲ್ಸಿಂಕಿಯಲ್ಲಿ ನಡೆದ ಸಮ್ಮರ್ ಒಲಿಂಪಿಕ್ಸ್ ನಲ್ಲಿ ಕುಸ್ತಿಪಟು ಜಾಧವ್, ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ರು. ಭಾರತಕ್ಕೆ ಇಂತಹ ಹೆಮ್ಮೆ ತಂದುಕೊಟ್ಟ ಅಥ್ಲೀಟ್ ಕುಟುಂಬ ಮಾತ್ರ ದುಸ್ಥಿತಿಯಲ್ಲಿದೆ.

ಜಾಧವ್ ಗೆದ್ದಿದ್ದ ಪದಕವನ್ನು ಹರಾಜು ಹಾಕಬೇಕಾದ ಅನಿವಾರ್ಯತೆಗೆ ಸಿಲುಕಿದೆ. ಮಹಾರಾಷ್ಟ್ರ ಸರ್ಕಾರ ತಾನು ಕೊಟ್ಟಿದ್ದ ಭರವಸೆಯನ್ನು ಈಡೇರಿಸಿಲ್ಲ, ಹಾಗಾಗಿ ಆರ್ಥಿಕ ಮುಗ್ಗಟ್ಟಿನಿಂದ ಕಂಗೆಟ್ಟಿರುವ ಕುಟುಂಬ ಪದಕ ಹರಾಜು ಹಾಕಲು ಮುಂದಾಗಿದೆ.

ತಮ್ಮ ಹುಟ್ಟೂರು ಸತಾರಾದ ಗೋಲೇಶ್ವರದಲ್ಲಿ ಕುಸ್ತಿ ಅಕಾಡೆಮಿ ಸ್ಥಾಪಿಸಬೇಕು ಅನ್ನೋದು ಜಾಧವ್ ಅವರ ಕನಸಾಗಿತ್ತು. ಆದ್ರೆ 65 ವರ್ಷಗಳೇ ಕಳೆದ್ರೂ ಅವರ ಆಸೆ ಈಡೇರಿಲ್ಲ. 2009ರಲ್ಲಿ ಸರ್ಕಾರ ಆಕಾಡೆಮಿ ಸ್ಥಾಪನೆಗಾಗಿ 1.98 ಕೋಟಿ ರೂಪಾಯಿ ಬಿಡುಗಡೆ ಮಾಡಿತ್ತು. ಆದ್ರೆ ಯೋಜನೆ ಮಾತ್ರ ಇದುವರೆಗೂ ಆರಂಭವೇ ಆಗಿಲ್ಲ.

ಆಗಸ್ಟ್ 14ರಂದು ಜಾಧವ್ ಅವರ 33ನೇ ಪುಣ್ಯತಿಥಿ ಇದೆ, ಅದಕ್ಕೂ ಮುನ್ನ ಅಕಾಡೆಮಿಗೆ ಚಾಲನೆ ನೀಡದೇ ಇದ್ದಲ್ಲಿ ಗ್ರಾಮಸ್ಥರು ಮತ್ತು ಕುಟುಂಬದವರೆಲ್ಲ ಒಟ್ಟಾಗಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಅವರ ಪುತ್ರ ರಂಜಿತ್ ಯಾದವ್ ಎಚ್ಚರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...