alex Certify
ಕನ್ನಡ ದುನಿಯಾ       Mobile App
       

Kannada Duniya

ಕಣಿವೆ ರಾಜ್ಯದ ಹೆಮ್ಮೆಯ ಕುವರಿಗೆ ಅದ್ಧೂರಿ ಸ್ವಾಗತ

champ

ಕಳೆದ 2 ದಶಕಗಳಿಂದ ಕಾಶ್ಮೀರದ ಬಂಡಪೋರಾ ನರಕಸದೃಶವಾಗಿದೆ. ಸದಾ ಗುಂಡಿನ ಮೊರೆತ, ಸಾವು-ನೋವು, ಶಾಲೆಗಳಿಗೆ ಬೆಂಕಿ ಹೀಗೆ ಕ್ರೌರ್ಯಕ್ಕೆ ನಲುಗಿ ಹೋಗಿದೆ.

ಆದ್ರೆ ನಿನ್ನೆ ಮಾತ್ರ ಬಂಡಿಪೋರಾದಲ್ಲಿ ಹಬ್ಬದ ಸಂಭ್ರಮವಿತ್ತು. ಮಹಿಳೆಯರು, ಪುರುಷರೆಲ್ಲ ಖುಷಿಯಿಂದ ಕುಣಿಯುತ್ತಿದ್ರು. ಈ ಸಂತೋಷಕ್ಕೆ ಕಾರಣ 8 ವರ್ಷದ ಸಾಹಸಿ ಪುಟಾಣಿ ತಾಜಾಮುಲ್ ಇಸ್ಲಾಮ್ ತವರಿಗೆ ಮರಳಿದ್ದು.

ಸೇನೆಯಿಂದ ತರಬೇತಿ ಪಡೆದ ಈ ಬಾಲಕಿ ವಿಶ್ವದ ಸಬ್ ಜೂನಿಯರ್ ಕಿಕ್ ಬಾಕ್ಸಿಂಗ್ ಚಾಂಪಿಯನ್. ಚಿನ್ನದ ಪದಕ ಗೆಲ್ಲುವ ಮೂಲಕ ಕಣಿವೆ ರಾಜ್ಯಕ್ಕೆ ಹೆಮ್ಮೆ ತಂದಿದ್ದಾಳೆ. ಇಟಲಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ತಾಜಾಮುಲ್ ಕಾಶ್ಮೀರದ ಪಾಲಿಗೆ ಹೊಸ ಆಶಾಕಿರಣ. 2015ರಲ್ಲಿ ದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲೂ ಈಕೆ ಸ್ವರ್ಣ ಗೆದ್ದಿದ್ದಳು.

ಎರಡನೇ ತರಗತಿಯಲ್ಲಿ ಓದುತ್ತಿರುವ ತಾಜಾಮುಲ್ ಸಾಧನೆಗೆ ಇಡೀ ದೇಶವೇ ಹೆಮ್ಮೆಪಟ್ಟಿದೆ. ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತಾಜಾಮುಲ್ ಬಂಡಿಪೋರಾದಿಂದ ದೆಹಲಿಗೆ ಬಂದು ನೆಲೆಸಿ 2 ತಿಂಗಳು ಸೇನೆಯಿಂದ ತರಬೇತಿ ಪಡೆದಿದ್ದಾಳೆ.

ದುರಂತ ಅಂದ್ರೆ ಕಳೆದ ನಾಲ್ಕು ತಿಂಗಳುಗಳಿಂದ ಕಾಶ್ಮೀರದಲ್ಲಿ ನಡೆದ ಹಿಂಸಾಚಾರದ ವೇಳೆ ಬಂಡಿಪೋರಾದಲ್ಲಿ ಅತಿ ಹೆಚ್ಚು ಶಾಲೆಗಳಿಗೆ ಬೆಂಕಿ ಹಚ್ಚಲಾಗಿದೆ. ಇನ್ನು ತಾಜಾಮುಲ್ ಗೆ ಇಬ್ಬರು ಸಹೋದರಿಯರು ಹಾಗೂ ಇಬ್ಬರು ಸಹೋದರರಿದ್ದು ಅವರು ಕೂಡ ಸೇನೆಯ ಕೇಂದ್ರೀಯ ವಿದ್ಯಾಲಯದಲ್ಲಿ ಓದುತ್ತಿದ್ದಾರೆ. ಕಿಕ್ ಬಾಕ್ಸಿಂಗ್ ಚಾಂಪಿಯನ್ ತಾಜಾಮುಲ್ ಗೆ ಸೇನೆ 1 ಲಕ್ಷ ರೂ. ನಗದು ನೀಡಿ ಗೌರವಿಸಿದ್ರೆ, ಸಿಎಂ ಮೆಹಬೂಬಾ ಮುಫ್ತಿ ಹಾಗೂ ರಾಜ್ಯಪಾಲ ಎನ್.ಎನ್. ವೋಹ್ರಾ 50,000 ರೂ. ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...