alex Certify
ಕನ್ನಡ ದುನಿಯಾ       Mobile App
       

Kannada Duniya

ತ್ರಿಶತಕ ಸಿಡಿಸಿದ ಕನ್ನಡಿಗ ಕರುಣ್ ನಾಯರ್

karun-nair-20ಚೆನ್ನೈ: ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ, ಪ್ರವಾಸಿ ಇಂಗ್ಲೆಂಡ್ ವಿರುದ್ಧದ 5 ನೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕರುಣ್ ನಾಯರ್ 381 ಬಾಲ್ ಗಳಲ್ಲಿ 303 ರನ್ ಗಳಿಸುವ ಮೂಲಕ ಚೊಚ್ಚಲ ತ್ರಿಶತಕ ದಾಖಲಿಸಿದ್ದಾರೆ.

ಇಂಗ್ಲೆಂಡ್ ಬೌಲರ್ ಗಳನ್ನು ತಮ್ಮ ಭರ್ಜರಿ ಬ್ಯಾಟಿಂಗ್ ಮೂಲಕ ದಂಡಿಸಿದ ಕರುಣ್ ನಾಯರ್ ಮೈದಾನದಲ್ಲಿದ್ದ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಇದೇ ಪಂದ್ಯದಲ್ಲಿ ಮತ್ತೊಬ್ಬ ಕನ್ನಡಿಗ ಕೆ.ಎಲ್. ರಾಹುಲ್ 199 ರನ್ ಗಳಿಸಿದ್ದು, ಕೇವಲ 1 ರನ್ ನಿಂದ ದ್ವಿಶತಕದಿಂದ ವಂಚಿತರಾಗಿದ್ದರು.

ಕರುಣ್ ನಾಯರ್ ತ್ರಿಶತಕ ಸಿಡಿಸುತ್ತಿದ್ದಂತೆಯೇ ಭಾರತ ತಂಡದ ಆಟಗಾರರೆಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದರು. ಈ ಹಿಂದೆ ಭಾರತದ ವೀರೇಂದ್ರ ಸೆಹ್ವಾಗ್ ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶತಕ ದಾಖಲಿಸಿದ್ದು, ಇದೀಗ ಕರುಣ್ ನಾಯರ್ ಸಹ ಆ ಸಾಲಿಗೆ ಸೇರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...