alex Certify
ಕನ್ನಡ ದುನಿಯಾ       Mobile App
       

Kannada Duniya

ರಣಜಿ ಪಂದ್ಯದಲ್ಲಿ ಕರುಣ್ ನಾಯರ್ ಭರ್ಜರಿ ಶತಕ

ಶಿವಮೊಗ್ಗ ನಗರದ ಕೆ ಎಸ್ ಸಿ ಎ  ಮೈದಾನದಲ್ಲಿ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಕರ್ನಾಟಕದ ಕರುಣ್ ನಾಯರ್ ಭರ್ಜರಿ ಶತಕ ಗಳಿಸಿದ್ದು,  ಹೈದರಾಬಾದ್ ಗೆಲುವಿಗೆ 380 ರನ್ ಗುರಿ ನೀಡಲಾಗಿದೆ.

ನಿನ್ನೆ 49 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿದ್ದ ಕರ್ನಾಟಕ ತಂಡ ಇಂದು ಆಟ ಮುಂದುವರೆಸಿದ್ದು, 105.4 ಓವರ್ ಗಳಲ್ಲಿ 332 ರನ್ ಗೆ ಎಲ್ಲ ವಿಕೆಟ್ ಕಳೆದುಕೊಂಡಿತು.

37 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ  ಕರುಣ್ ನಾಯರ್ ಇಂದು ಆಟ ಮುಂದುವರೆಸಿ ಭರ್ಜರಿ ಶತಕ ಗಳಿಸಿದರು. 229 ಎಸೆತಗಳಲ್ಲಿ 17 ಬೌಂಡರಿ ಒಳಗೊಂಡ 134 ರನ್ ಗಳಿಸಿದರು.

ಸ್ಟುವರ್ಟ್ ಬಿನ್ನಿ 72, ಸಿ.ಎಂ. ಗೌತಮ್ 21, ಶ್ರೇಯಸ್ ಗೋಪಾಲ್ 0, ಆರ್. ವಿಜಯಕುಮಾರ್ 14, ಎ.ನಿತಿನ್ 0, ಅರವಿಂದ್ ಶ್ರೀನಾಥ್ ಅಜೇಯ 10 ರನ್ ಗಳಿಸಿದರು.

ಅಂತಿಮವಾಗಿ 105.4 ಓವರ್ ಗಳಲ್ಲಿ ಕರ್ನಾಟಕ ತಂಡ 332 ರನ್ ಗೆ ಎಲ್ಲ ವಿಕೆಟ್ ಕಳೆದುಕೊಂಡು ಹೈದರಾಬಾದ್ ಗೆಲುವಿಗೆ 380 ರನ್  ಗುರಿ ನೀಡಲಾಗಿದೆ.

ಹೈದರಾಬಾದ್ ಪರ ಉತ್ತಮ ಪ್ರದರ್ಶನ ನೀಡಿದ ಮೆಹದಿ ಹಸನ್ 5, ಆಕಾಶ್ ಭಂಡಾರಿ 3, ರವಿಕಿರಣ್ 1, ಪ್ರಗ್ಯಾನ್ ಓಜಾ 1 ವಿಕೆಟ್ ಪಡೆದರು.

ಸ್ಕೋರ್ ವಿವರ:

ಕರ್ನಾಟಕ ಮೊದಲ ಇನ್ನಿಂಗ್ಸ್ 183, ಎರಡನೇ ಇನ್ನಿಂಗ್ಸ್ 332,

ಹೈದರಾಬಾದ್ ಮೊದಲ ಇನ್ನಿಂಗ್ಸ್ 136, ಎರಡನೇ ಇನ್ನಿಂಗ್ಸ್ ವಿಕೆಟ್ ನಷ್ಟವಿಲ್ಲದೇ 03 ರನ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...