alex Certify
ಕನ್ನಡ ದುನಿಯಾ       Mobile App
       

Kannada Duniya

‘ರಾಜ್ಯದಲ್ಲಿ ಮಹಿಳಾ ಕ್ರಿಕೆಟ್ ಗೆ ಪ್ರೋತ್ಸಾಹ’

ಕರ್ನಾಟಕದಲ್ಲಿ ಮಹಿಳಾ ಕ್ರಿಕೆಟ್ ಗೆ ಹೆಚ್ಚು ಪ್ರೋತ್ಸಾಹ ಸಿಗುತ್ತಿದೆ ಎಂದು ರಾಜ್ಯ ಮಹಿಳಾ ಸೀನಿಯರ್ ಕ್ರಿಕೆಟ್ ತಂಡದ ನಾಯಕಿ ದಿವ್ಯ  ಹೇಳಿದರು.

ಅವರು ಇಂದು ಶಿವಮೊಗ್ಗದ ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಿಳೆಯರು ಇತ್ತೀಚಿನ ದಿನಗಳಲ್ಲಿ ನಾಲ್ಕು ಗೋಡೆಗಳಿಂದ ಹೊರಬರುತ್ತಿದ್ದಾರೆ. ಕೇವಲ ಅಡುಗೆ ಮನೆಯಲ್ಲಿ ಇಲ್ಲ. ಮಡಿವಂತಿಕೆ ಸಮಾಜದಲ್ಲಿ ಕ್ರೀಡೆಗೆ ಮಹಿಳೆಯರು ಬರುವುದು ತುಸು ಕಷ್ಟವೇ. ಆದರೆ ಕಾಲ ಬದಲಾದಂತೆ ಮಹಿಳೆಯರೂ ಸಹ ಕ್ರೀಡೆಯಲ್ಲಿ ಅದರಲ್ಲೂ ಕ್ರಿಕೆಟ್ ನಂತಹ ಸವಾಲಿನ ಆಟವನ್ನು ಧೈರ್ಯದಿಂದ ಎದುರಿಸುತ್ತಿದ್ದಾರೆ ಎಂದರು.

ಈ ಬಾರಿ ವಿಶ್ವ ಕಪ್ ನಲ್ಲಿ ಮಹಿಳಾ ತಂಡ ರನ್ನರ್ ಆಗಿದ್ದು, ಫೈನಲ್ ನಲ್ಲಿ ಸೋತರೂ ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಒಂದು ಉತ್ತಮ ಉತ್ತೇಜನ ಸಿಕ್ಕಿದೆ. ಅದು ಕರ್ನಾಟಕವು ಸೇರಿದಂತೆ  ಎಲ್ಲಾ ರಾಜ್ಯಗಳಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಹೆಣ್ಣುಮಕ್ಕಳು ಕ್ರಿಕೆಟ್ ಆಡಲು ಪ್ರೇರಣೆ ನೀಡಿದೆ ಎಂದರು.

ರಾಜ್ಯದಲ್ಲಿ ಸುಮಾರು 300ಕ್ಕೂ ಹೆಚ್ಚು ಯುವತಿಯರು ಕ್ರಿಕೆಟ್ ಅಭ್ಯಾಸದಲ್ಲಿ ತೊಡಗಿರುವುದು ಒಳ್ಳೆಯ ಬೆಳವಣಿಗೆ. ಮಹಿಳೆಯರಿಗೂ ಕ್ರಿಕೆಟ್ ನಲ್ಲಿ ಒಳ್ಳೆಯ ಭವಿಷ್ಯವಿದೆ. ಶಿವಮೊಗ್ಗ ಕ್ರಿಕೆಟಿಗೆ ಹೆಸರು ಪಡೆದಿದೆ. ಅಂತರ್ರಾಷ್ಟ್ರೀಯ ಮಟ್ಟದ ಕ್ರೀಡಾಂಗಣಗಳು ಇಲ್ಲಿವೆ. ಇಲ್ಲಿನ ಹಲವು ಗಣ್ಯರು ಕ್ರಿಕೆಟ್ ಗೆ ಹೆಚ್ಚಿನ ಪ್ರೋತ್ಸಾಹ ಕೊಡುತ್ತಿದ್ದಾರೆ. ಆ ಕಾರಣದಿಂದಲೇ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಯಲ್ಲಿ ಕಳೆದ ಐದು ದಿನದಿಂದ ಶಿವಮೊಗ್ಗ ಮಹಿಳಾ ಕ್ರಿಕೆಟ್ ತಂಡದೊಂದಿಗೆ ಕ್ರಿಕೆಟ್ ಆಡುತ್ತಿದ್ದೇವೆ ಎಂದರು.

ಭಾರತ ಮಹಿಳಾ ಕ್ರಿಕೆಟ್ ತಂಡದ ರಾಜೇಶ್ವರಿ ಗಾಯಕ್ವಾಡ್ ಸಹೋದರಿ, ಕ್ರಿಕೆಟ್ ಆಟಗಾರ್ತಿ ರಾಮೇಶ್ವರಿ ಗಾಯಕ್ವಾಡ್ ಮಾತನಾಡಿ, ಹೆಣ್ಣುಮಕ್ಕಳು ಕ್ರಿಕೆಟ್ ಗೆ ಬರಲು ಪೋಷಕರ ಸಹಕಾರ, ಪ್ರೋತ್ಸಾಹ ಅಗತ್ಯ ಎಂದು ಹೇಳಿದರು. ವೇದಿಕೆಯಲ್ಲಿ ಪ್ರೆಸ್ ಟ್ರಸ್ಟ್ ಉಪಾಧ್ಯಕ್ಷ ಗಿರೀಶ್ ಉಮ್ರಾಯ್, ಕಾರ್ಯದರ್ಶಿ ಶಿ.ವಿ. ಸಿದ್ದಪ್ಪ ಇದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...