alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಸಿಸಿಐ ಗೆ ಕಪಿಲ್ ದೇವ್ ನೀಡಿದ್ದಾರೆ ಈ ಸಲಹೆ

1983 ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕರಾಗಿದ್ದ ಕಪಿಲ್ ದೇವ್ ಬಿಸಿಸಿಐ ಗೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಟೀಂ ಇಂಡಿಯಾ ಆಟಗಾರರ ಪ್ರವಾಸಕ್ಕೆ ಖಾಸಗಿ ವಿಮಾನವೊಂದನ್ನು ಖರೀದಿಸಬೇಕೆಂದು ಹೇಳಿರುವ ಕಪಿಲ್ ದೇವ್, ಇದರಿಂದಾಗಿ ಆಟಗಾರರ ಸಮಯ ಉಳಿತಾಯವಾಗಲಿದೆಯಲ್ಲದೇ ವಿಶ್ರಾಂತಿ ಸಹ ಸಿಗುತ್ತದೆ. ಇದರಿಂದ ಬಿಸಿಸಿಐ ಗೂ ಹಣ ಉಳಿತಾಯವಾಗುತ್ತದೆ ಎಂದಿದ್ದಾರೆ.

ಟೀಂ ಇಂಡಿಯಾ ಆಟಗಾರರು ಪಂದ್ಯಗಳ ಕಾರಣಕ್ಕಾಗಿ ಸದಾ ದೇಶ-ವಿದೇಶಗಳ ಪ್ರವಾಸದಲ್ಲಿರುತ್ತಾರೆ. ಹೀಗಾಗಿ ಆರ್ಥಿಕವಾಗಿ ಸದೃಢವಾಗಿರುವ ಬಿಸಿಸಿಐ ಇದಕ್ಕಾಗಿ ಖಾಸಗಿ ವಿಮಾನ ಖರೀದಿಸಿದರೆ ತಂಡಕ್ಕೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ. ಜೊತೆಗೆ ದೇಶದ ಪ್ರಮುಖ ಸ್ಥಳಗಳಲ್ಲಿ ಗೆಸ್ಟ್ ಹೌಸ್ ನಿರ್ಮಾಣ ಮಾಡಿದರೆ ಆಟಗಾರರ ವಾಸ್ತವ್ಯಕ್ಕೆ ಪಂಚತಾರಾ ಹೋಟೆಲ್ ಗಳಲ್ಲಿ ರೂಂ ಮಾಡುವುದೂ ತಪ್ಪಿದಂತಾಗುತ್ತದೆ ಎಂದು ಕಪಿಲ್ ದೇವ್ ಹೇಳಿದ್ದಾರೆ.

ಖಾಸಗಿ ವಿಮಾನ ಖರೀದಿ ಹಾಗೂ ನಿರ್ವಹಣೆಗೆ ಬಿಸಿಸಿಐ ಗೆ ಸುಮಾರು 500 ಕೋಟಿ ರೂ. ವೆಚ್ಚ ತಗಲಬಹುದು. ವಾರ್ಷಿಕ ಸಾವಿರಾರು ಕೋಟಿ ರೂ. ವಹಿವಾಟು ನಡೆಸುವ ಬಿಸಿಸಿಐ ಗೆ ಇದು ದೊಡ್ಡ ಹೊರೆಯಲ್ಲವೆಂದು ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ. ತಾವು ಟೀಂ ಇಂಡಿಯಾ ಆಟಗಾರರೂ ತಮ್ಮ ಓಡಾಟಕ್ಕೆ ಸ್ವಂತ ಚಾರ್ಟರ್ಡ್ ವಿಮಾನ ಹೊಂದುವುದನ್ನು ನೋಡಬಯಸುತ್ತೇನೆ ಎಂದಿರುವ ಕಪಿಲ್ ದೇವ್, ಆಟಗಾರರು ಆರ್ಥಿಕವಾಗಿ ಮತ್ತಷ್ಟು ಸದೃಢರಾಗಲು ವಿದೇಶದ ಕ್ಲಬ್ ಕ್ರಿಕೆಟ್ ತಂಡ ಸೇರ್ಪಡೆಗೊಳ್ಳುವುದನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...