alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಪಿನ್ ದಾಳಿಗೆ ಕುಸಿದ ನ್ಯೂಜಿಲೆಂಡ್, ಕೊಹ್ಲಿ ಪಡೆಗೆ 215 ರನ್ ಮುನ್ನಡೆ

jadeja

ಕಾನ್ಪುರ್: ಇಲ್ಲಿನ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ, ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದ 3 ನೇ ದಿನದಾಟದ ಅಂತ್ಯಕ್ಕೆ, ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ.

ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 318 ರನ್ ಗಳಿಸಿತ್ತು. ನ್ಯೂಜಿಲೆಂಡ್ ಭಾರತದ ಸ್ಪಿನ್ ದಾಳಿಗೆ ತತ್ತರಿಸಿದ್ದು, ಮೊದಲ ಇನ್ನಿಂಗ್ಸ್ ನಲ್ಲಿ 262 ರನ್ ಗಳಿಸಿದೆ. ನ್ಯೂಜಿಲೆಂಡ್ ಪರವಾಗಿ, ಟಾಮ್ ಲೋಥಮ್ 58, ಕೇನ್ ವಿಲಿಯನ್ ಸನ್ 75, ಲೂಕ್ ರಾಂಚಿ 38, ಬ್ರಾಡ್ಲಿ ವೇಯ್ಟಿಂಗ್ 21, ಮಿಚಲ್ ಸ್ಯಾಟ್ನರ್ 32 ರನ್ ಗಳಿಸಿದರು. ಭಾರತದ ಪರವಾಗಿ ಸ್ಪಿನ್ನರ್ ಗಳು ಅಮೋಘ ಪ್ರದರ್ಶನ ನೀಡಿದ್ದಾರೆ.

ಜಡೇಜ, ಅಶ್ವಿನ್ ಮಾರಕ ದಾಳಿ ನಡೆಸಿದರು. ಜಡೇಜ 5 ವಿಕೆಟ್ ಗಳಿಸಿದರೆ, ಅಶ್ವಿನ್ 4 ವಿಕೆಟ್ ಕಬಳಿಸಿದರು. 2 ನೇ ಇನ್ನಿಂಗ್ಸ್ ಆರಂಭಿಸಿದ ಭಾರತ 1 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದೆ.

ಕೆ.ಎಲ್. ರಾಹುಲ್ 38 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಮುರುಳಿ ವಿಜಯ್ 64, ಚೇತೇಶ್ವರ್ ಪೂಜಾರ್ 50 ರನ್ ಗಳಿಸಿ ಅಜೇಯರಾಗುಳಿದಿದ್ದು, 3 ನೇ ದಿನದಾಟ ಅಂತ್ಯವಾಗಿದೆ. ಭಾರತ 215 ರನ್ ಮುನ್ನಡೆ ಗಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...