alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ ನಿಂದ ಹಿಂದೆ ಸರಿದ ಕಾರಣ ಬಿಚ್ಚಿಟ್ಟ ಕ್ರಿಕೆಟಿಗ

ಈ ಬಾರಿಯ ಐಪಿಎಲ್ ಪಂದ್ಯಾವಳಿಗಳಿಗೆ ವೇದಿಕೆ ಸಜ್ಜಾಗಿದ್ದು, ಆಟಗಾರರ ಹರಾಜು ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದೆ. ಈ ಬಾರಿಯ ಹರಾಜಿನಲ್ಲಿ ಕೆಲ ಖ್ಯಾತನಾಮ ಕ್ರಿಕೆಟಿಗರಿಗೆ ಡಿಮ್ಯಾಂಡ್ ಇಲ್ಲದಂತಾಗಿದ್ದು, ಕೊನೆ ಕ್ಷಣದಲ್ಲಿ ತಮ್ಮ ಮೂಲ ಬೆಲೆಗೆ ಸೇಲ್ ಆಗಿದ್ದಾರೆ.

ಇದರ ಮಧ್ಯೆ ಈ ಹಿಂದಿನ ಐಪಿಎಲ್ ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿದ್ದ ಕ್ರಿಕೆಟಿಗರೊಬ್ಬರು ತಾವು ಈ ಬಾರಿಯ ಹರಾಜಿನಲ್ಲಿ ಏಕೆ ಪಾಲ್ಗೊಳ್ಳಲಿಲ್ಲ ಎಂಬುದರ ಕಾರಣ ಬಿಚ್ಚಿಟ್ಟಿದ್ದಾರೆ.

ಆಸ್ಟ್ರೇಲಿಯಾದ 27 ವರ್ಷದ ವೇಗದ ಬೌಲರ್ ಕನೆ ರಿಚರ್ಡ್ಸನ್ ಈ ಹಿಂದಿನ ಐಪಿಎಲ್ ನಲ್ಲಿ ಪುಣೆ ವಾರಿಯರ್ಸ್, ರಾಜಸ್ಥಾನ್ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದು, ಒಟ್ಟು 14 ಐಪಿಎಲ್ ಪಂದ್ಯಗಳನ್ನಾಡಿ 18 ವಿಕೆಟ್ ಗಳನ್ನು ಪಡೆದಿದ್ದರು.

ಈ ಬಾರಿಯ ಹರಾಜು ಪ್ರಕ್ರಿಯೆಯಿಂದ ರಿಚರ್ಡ್ಸನ್ ಹಿಂದೆ ಸರಿದಿದ್ದು, ತಾವು ಆಸ್ಟ್ರೇಲಿಯಾ ಟೆಸ್ಟ್ ತಂಡಕ್ಕೆ ಆಯ್ಕೆಯಾಗಲು ಸತತ ಅಭ್ಯಾಸ ನಡೆಸುತ್ತಿದ್ದೇನೆ. ಈ ಕಾರಣಕ್ಕಾಗಿ ಪ್ರಸಕ್ತ ಸಾಲಿನ ಐಪಿಎಲ್ ಹರಾಜಿನಲ್ಲಿ ಭಾಗವಹಿಸಲಿಲ್ಲವೆಂದು ತಿಳಿಸಿದ್ದಾರೆ. ಐಪಿಎಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರೆ ಭಾರೀ ಮೊತ್ತ ಸಿಗುತ್ತಿತ್ತು. ಆದರೂ ಕ್ರಿಕೆಟ್ ಕೆರಿಯರ್ ದೃಷ್ಟಿಯಿಂದ ಹಿಂದೆ ಸರಿದಿದ್ದಾಗಿ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...