alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಜೊತೆ ಕ್ರೀಡಾ ಸಂಬಂಧ ಕಡಿದುಕೊಳ್ಳುತ್ತಾ ಪಾಕ್ ?

pak

ಭಾರತದೊಂದಿಗೆ ಎಲ್ಲ ಕ್ರೀಡಾ ಸಂಬಂಧವನ್ನು ಕಡಿದುಕೊಳ್ಳುವ ಚಿಂತನೆಯಲ್ಲಿ ಪಾಕಿಸ್ತಾನವಿದೆ. ಈ ಬಗ್ಗೆ ಎಲ್ಲ ಸಚಿವಾಲಯಗಳ ಸಲಹೆ ಪಡೆಯುತ್ತಿರುವುದಾಗಿ ಪಾಕಿಸ್ತಾನ ಕ್ರೀಡಾ ಸಚಿವ ರಿಯಾಜ್ ತಿಳಿಸಿದ್ದಾರೆ.

ಪಾಕಿಸ್ತಾನದ ಯಾವುದೇ ಆಟಗಾರರು ಹಾಗೂ ತಂಡ ಭಾರತದ ನೆಲದಲ್ಲಿ ಆಡಬಾರದು ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದೇವೆ ಎಂದು ಕ್ರೀಡಾ ಸಚಿವ ರಿಯಾಜ್ ತಿಳಿಸಿದ್ದಾರೆ. ವೀಸಾ ಸಿಗದ ಕಾರಣ ಕಿರಿಯರ ವಿಶ್ವ ಕಪ್ ಚಾಂಪಿಯನ್ ಶಿಪ್ ನಲ್ಲಿ ಪಾಕಿಸ್ತಾನ ಪಾಲ್ಗೊಂಡಿಲ್ಲ. ಇದು ಪಾಕಿಸ್ತಾನಿಗಳ ಬೇಸರಕ್ಕೆ ಕಾರಣವಾಗಿದೆ. ಭಾರತದ ಹೈ ಕಮಿಷನ್ ಹಾಗೂ ಅಂತರಾಷ್ಟ್ರೀಯ ಹಾಕಿ ಫೆಡರೇಷನ್ ಪಾಕಿಸ್ತಾನದ ಜೊತೆ ನಡೆದುಕೊಂಡಿರುವುದು ಬೇಸರಕ್ಕೆ ಕಾರಣವಾಗಿದೆ. ಭಾರತದ ಜೊತೆ ಎಲ್ಲ ಕ್ರೀಡಾ ಸಂಬಂಧ ಕಡಿದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ರಿಯಾಜ್ ತಿಳಿಸಿದ್ದಾರೆ.

ಅಂತರಾಷ್ಟ್ರೀಯ ಹಾಕಿ ಫೆಡರೇಷನ್ ಕೂಡ ಭಾರತದ ಪರವಾಗಿದೆ. ಯಾಕೆಂದ್ರೆ ಫೆಡರೇಷನ್ ಅಧ್ಯಕ್ಷರು ಕೂಡ ಭಾರತೀಯರು ಎಂದು ರಿಯಾಜ್ ಆರೋಪಿಸಿದ್ದಾರೆ. ಪಾಕಿಸ್ತಾನದ ಕಿರಿಯ ಹಾಕಿ ತಂಡದ ಜೊತೆ ಭಾರತ ಕೆಟ್ಟದಾಗಿ ನಡೆದುಕೊಂಡಿದ್ದು, ಇದಕ್ಕೆ ಕ್ಷಮೆ ಇಲ್ಲ. ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಕ್ರೀಡಾ ಸಚಿವಾಲಯ, ಒಲಂಪಿಕ್ಸ್ ಅಸೋಸಿಯೇಷನ್ ಮತ್ತು ಕ್ರೀಡಾ ಸಿಬ್ಬಂದಿ ಜೊತೆ ಮಾತುಕತೆ ನಡೆಸುತ್ತಿದ್ದೇವೆ ಎಂದು ರಿಯಾಜ್ ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...