alex Certify
ಕನ್ನಡ ದುನಿಯಾ       Mobile App
       

Kannada Duniya

ನದಿಯಲ್ಲಿತ್ತು ಜಸ್ಪ್ರೀತ್ ಬೂಮ್ರಾ ಅಜ್ಜನ ಮೃತದೇಹ

ಭಾರತ ಕ್ರಿಕೆಟ್ ತಂಡದ ಆಟಗಾರ ಜಸ್ ಪ್ರೀತ್ ಬೂಮ್ರಾ ಅವರ ಅಜ್ಜನ ಮೃತದೇಹ ಅಹಮದಾಬಾದ್ ನ ಸಬರಮತಿ ನದಿಯಲ್ಲಿ ಕಂಡು ಬಂದಿದೆ.

ಭಾನುವಾರ ಜಸ್ ಪ್ರೀತ್ ಬೂಮ್ರಾ ಅವರ ಅಜ್ಜ ಸಂತೋಖ್ ಸಿಂಗ್ ಅವರ ಮೃತದೇಹ ಸಬರಮತಿ ನದಿಯಲ್ಲಿ ಕಂಡು ಬಂದಿದ್ದು, ಅಗ್ನಿಶಾಮಕ ಮತ್ತು ತುರ್ತು ಸೇವೆ ಸಿಬ್ಬಂದಿ ಶವವನ್ನು ಮೇಲೆತ್ತಿದ್ದಾರೆ.

84 ವರ್ಷದ ಸಂತೋಖ್ ಸಿಂಗ್ ಶುಕ್ರವಾರದಿಂದ ನಾಪತ್ತೆಯಾಗಿದ್ದು, ಕುಟುಂಬ ಸದಸ್ಯರು ವಸ್ತ್ರಪುರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.

ಅಹಮದಾಬಾದ್ ಮಿರನ್ ನ ವಾಸ್ತಪುರದಲ್ಲಿ ಸೋನಾಲ್ ಅಪಾರ್ಟ್ ಮೆಂಟ್ ನಲ್ಲಿ ಮಗಳ ಮನೆಯಲ್ಲಿ ಅವರು ವಾಸವಾಗಿದ್ದರು. ಡಿಸೆಂಬರ್ 5 ರಂದು ಹುಟ್ಟುಹಬ್ಬದ ಪ್ರಯುಕ್ತ ಜಸ್ ಪ್ರೀತ್ ರನ್ನು ಭೇಟಿಯಾಗಲು ಅವರು ಬಯಸಿದ್ದರು. ಡಿಸೆಂಬರ್ 8 ರಂದು ಸಂತೋಖ್ ಜಾರ್ಖಂಡ್ ನಲ್ಲಿದ್ದ ತಮ್ಮ ಪುತ್ರ ಬಲ್ವೀಂದರ್ ಭೇಟಿಗೆ ತೆರಳಿದ್ದವರು ನಾಪತ್ತೆಯಾಗಿದ್ದಾರೆ.

ಉತ್ತರಾಖಂಡ್ ನಲ್ಲಿ ಆಟೋ ಓಡಿಸುತ್ತಿದ್ದ ಸಂತೋಖ್ ಸಿಂಗ್ ಹಿಂದೆ ಯಶಸ್ವಿ ಉದ್ಯಮಿಯಾಗಿದ್ದರು. ಜಸ್ ಪ್ರೀತ್ ತಂದೆ ನಿಧನದ ಬಳಿಕ ಅವರ ವ್ಯವಹಾರ ಇಳಿಮುಖವಾಗಿತ್ತು. ಟಿ.ವಿ.ಯಲ್ಲಿ ಮೊಮ್ಮಗನನ್ನು ನೋಡಿದ್ದ ಸಂತೋಖ್ ಭೇಟಿಯಾಗಲು ಬಯಸಿದ್ದರು.

ಆದರೆ, ಜಸ್ ಪ್ರೀತ್ ತಾಯಿ ಭೇಟಿಗೆ ಅವಕಾಶ ನೀಡಿರಲಿಲ್ಲ ಎಂದು ಸಂತೋಖ್ ಪುತ್ರಿ ರಾರಂದರ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...