alex Certify
ಕನ್ನಡ ದುನಿಯಾ       Mobile App
       

Kannada Duniya

ಎರಡನೇ ಟೆಸ್ಟ್ ಗೂ ಬೂಮ್ರಾ ಅಲಭ್ಯ, ಕಾರಣ ಏನು ಗೊತ್ತಾ…?

ಲಾರ್ಡ್ಸ್ ಅಂಗಳದಲ್ಲಿ ಇಂದು ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಕಣಕ್ಕೆ ಇಳಿಯಲಿದೆ. ಮೊದಲ ಟೆಸ್ಟ್ ನಲ್ಲಿ ಸೋತು ಮುಖಭಂಗ ಅನುಭವಿಸಿರುವ ಕೊಹ್ಲಿ ಪಡೆ, ಎರಡನೇ ಟೆಸ್ಟ್ ನಲ್ಲಿ ಪುಟಿದೇಳುವ ಲೆಕ್ಕಾಚಾರ ಹಾಕಿಕೊಂಡಿದೆ.

ಎರಡೂ ತಂಡದಲ್ಲೂ ಬದಲಾವಣೆಯ ಗಾಳಿ ಬೀಸಿದೆ. ಅಂದ ಹಾಗೆ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಜಸ್ಪ್ರಿತ್ ಬೂಮ್ರಾ ಇನ್ನೂ ಚೇತರಿಕೆ ಕಂಡಿಲ್ಲ. ಸದ್ಯ ಇಂಗ್ಲೆಂಡ್ ನಲ್ಲೇ ಟೀಮ್ ಇಂಡಿಯಾ ಜೊತೆ ಇರುವ ಬೂಮ್ರಾ ಗಾಯದ ಸಮಸ್ಯೆ ಕಾರಣ, ಲಾರ್ಡ್ಸ್ ಅಂಗಳದಲ್ಲಿ ಕಣಕ್ಕೆ ಇಳಿಯೋದಿಲ್ಲ.

ಬಿಸಿಸಿಐ ತಂಡ ಪ್ರಕಟಿಸಿದಾಗ ಬೂಮ್ರಾ ಎರಡನೇ ಟೆಸ್ಟ್ ನಲ್ಲಿ ಆಡುವ ಲೆಕ್ಕಾಚಾರ ಹಾಕಿಕೊಂಡಿತ್ತು. ಆದ್ರೆ, ಐರ್ಲೆಂಡ್ ವಿರುದ್ಧದ ಟಿ-20 ಪಂದ್ಯ ಆಡುವಾಗ ಗಾಯ ಮಾಡಿಕೊಂಡಿದ್ದ ಬೂಮ್ರಾ ಗಾಯ ಇನ್ನು ಗುಣವಾಗಿಲ್ಲ ಎಂದು ಭಾರತ ತಂಡದ ಬೌಲಿಂಗ್ ಕೋಚ್ ಭರತ್ ಅರುಣ್ ಸ್ಪಷ್ಟಪಡಿಸಿದ್ದು, ಎರಡನೇ ಟೆಸ್ಟ್ ನಿಂದಲೂ ಹೊರನಡೆದಿದ್ದಾರೆ.

ಇದ್ರಿಂದ ಟೀಮ್ ಇಂಡಿಯಾದ ಬೌಲಿಂಗ್ ವಿಭಾಗಕ್ಕೆ ಕೊಂಚ ಪೆಟ್ಟು ಬಿದ್ದಂತೆ ಆಗಿದೆ. ಆದ್ರೆ, ಮೊದಲ ಟೆಸ್ಟ್ ನಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿರುವ ಮೊಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾರ ಮೇಲೆ ಭರವಸೆ ಹೆಚ್ಚಿದೆ.

ಲಾರ್ಡ್ಸ್ ಅಂಗಳದಲ್ಲಿ 2014ರಲ್ಲಿ ಇಶಾಂತ್ ಶರ್ಮಾ 7 ವಿಕೆಟ್ ಗಳನ್ನು ಕಿತ್ತು ಸಂಭ್ರಮಿಸಿದ್ದರು. ಇಶಾಂತ್ ತಂಡದಲ್ಲಿ ಸ್ಥಾನ ಪಡೆಯುವುದು ಪಕ್ಕಾ. ಇನ್ನು ಇದೇ ಅಂಗಳದಲ್ಲಿ ಭುವಿ ಕಮಾಲ್ ನ ಆಟ ಆಡಿ ಎಲ್ಲರ ಚಿತ್ತ ಸೆಳೆದಿದ್ದರು. ಅಲ್ಲದೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಅಜಿಂಕ್ಯಾ ರಹಾನೆ ಇದೇ ಅಂಗಳದಲ್ಲಿ ಮೂರಂಕಿ ಮುಟ್ಟಿ ಸಾಧನೆ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...