alex Certify
ಕನ್ನಡ ದುನಿಯಾ       Mobile App
       

Kannada Duniya

ವಿದೇಶಕ್ಕೆ ಹೋಗುವ ಮುನ್ನ ಹೀಗೆ ಸಿದ್ಧವಾಗ್ತಾರೆ ಬೂಮ್ರಾ

ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ವಿದೇಶಿ ಪ್ರವಾಸಕ್ಕೆ ಹೋಗುವ ಮುನ್ನ ಹೇಗೆ ಸಿದ್ಧವಾಗ್ತೇನೆ ಎಂಬುದನ್ನು ಹೇಳಿದ್ದಾರೆ. ಕ್ರಿಕೆಟ್ ರಣನೀತಿಯೊಂದೆ ಅಲ್ಲ ಪ್ರವಾಸಕ್ಕೆ ಹೋಗುವ ದೇಶದ ಪ್ರಸಿದ್ಧ ಸ್ಥಳಗಳನ್ನು ಕಣ್ತುಂಬಿಕೊಳ್ಳಲು ಬಯಸುತ್ತಾರಂತೆ.

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ಲಭ್ಯವಿರುವ ಬೂಮ್ರಾ, ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಿದಾಗ ಅಲ್ಲಿನ ಸ್ಥಳಗಳ ಸಂಸ್ಕೃತಿ ನಮಗೆ ತಿಳಿಯುತ್ತದೆ. ಇದು ಉತ್ತಮ ಪ್ರದರ್ಶನ ನೀಡಲೂ ನೆರವಾಗುತ್ತದೆ ಎಂದು ಬೂಮ್ರಾ ಹೇಳಿದ್ದಾರೆ. ಪ್ರವಾಸಕ್ಕೆ ಹೋಗುವ ಮುನ್ನ ನಾನು ಮೊದಲೇ ಪ್ಲಾನ್ ಮಾಡತ್ತೇನೆ. ಯಾವುದೇ ದೇಶಕ್ಕೆ ಹೋಗುವ ಮೊದಲು ಆ ದೇಶದ ಕೆಲ ವಿಡಿಯೋಗಳನ್ನು ನೋಡುತ್ತೇನೆ. ಅಲ್ಲಿ ಯಾವುದು ಕೆಲಸಕ್ಕೆ ಬರುತ್ತದೆ. ಸ್ಥಳೀಯ ಆಟಗಾರರು ಅಲ್ಲಿ ಏನು ಮಾಡ್ತಾರೆ ಎಂಬುದನ್ನೆಲ್ಲ ತಿಳಿದಿರುತ್ತೇನೆ. ದೀರ್ಘ ಪ್ರವಾಸದ ವೇಳೆ ಇದು ಅವಶ್ಯಕ ಎಂದು ಬೂಮ್ರಾ ಹೇಳಿದ್ದಾರೆ.

ಐರ್ಲೆಂಡ್ ವಿರುದ್ಧದ ಟಿ-20 ಪಂದ್ಯದಲ್ಲಿ ಹೆಬ್ಬೆರಳಿಗೆ ಗಾಯಮಾಡಿಕೊಂಡಿದ್ದ ಬೂಮ್ರಾ ಇಂಗ್ಲೆಂಡ್ ವಿರುದ್ಧ ಟಿ-2 ಹಾಗೂ ಏಕದಿನ ಪಂದ್ಯವನ್ನು ಆಡಲಿಲ್ಲ. ಟೆಸ್ಟ್ ತಂಡದಲ್ಲಿ ಸ್ಥಾನ ಸಿಕ್ಕಿದೆ. ಆದ್ರೆ ಮೊದಲ ಪಂದ್ಯದಲ್ಲಿ ಕಾಣಿಸಿಕೊಳ್ಳುವುದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...