alex Certify
ಕನ್ನಡ ದುನಿಯಾ       Mobile App
       

Kannada Duniya

ಫಿಫಾಗೆ ಭಾವುಕ ವಿದಾಯ ಹೇಳಿದ ಜಪಾನ್…!

ಫಿಫಾ ವಿಶ್ವಕಪ್ ಫುಟ್ಬಾಲ್ ನಲ್ಲಿ ಜಪಾನ್ ಈ ಬಾರಿಯೂ ಕ್ವಾರ್ಟರ್ ಫೈನಲ್ ತಲುಪುವಲ್ಲಿ ವಿಫಲವಾಗಿದೆ. ಬೆಲ್ಜಿಯಂ ವಿರುದ್ಧ ನಡೆದ ರೋಚಕ ಹಣಾಹಣಿಯಲ್ಲಿ ಜಪಾನ್ ತೀವ್ರ ಪೈಪೋಟಿ ನೀಡಿತ್ತು. 2-2 ಗೋಲುಗಳಿಂದ ಸಮಬಲ ಸಾಧಿಸಿತ್ತು. ಆದ್ರೆ ಎಕ್ಸ್ಟ್ರಾ ಟೈಮ್ನಲ್ಲಿ ಬೆಲ್ಜಿಯಂ ಒಂದು ಗೋಲು ಗಳಿಸಿ ಪ್ರಬಲ ಜಪಾನ್ ತಂಡವನ್ನ ಫಿಫಾ ವಿಶ್ವಕಪ್ ಸ್ಪರ್ಧೆಯಿಂದ ಹೊರಗುಳಿಯುವಂತೆ ಮಾಡಿತು.

ವಿಶ್ವಕಪ್ ಇತಿಹಾಸದಲ್ಲೇ ಮೂರನೇ ಬಾರಿ ಜಪಾನ್ ಎಂಟರ ಘಟ್ಟಕ್ಕೆ ತಲುಪುವ ಹಂತದಲ್ಲಿ ಟೂರ್ನಿಯಿಂದ ನಿರ್ಗಮಿಸಿದೆ. ಈ ಸೋಲು ಜಪಾನ್ ಆಟಗಾರರನ್ನ ತೀವ್ರವಾದ ನೋವಿಗೆ ನೂಕಿದೆ. ಪಂದ್ಯದ ಬಳಿಕ ಜಪಾನ್ ಆಟಗಾರರು ಸೋಲಿನ ನಿರಾಸೆಯಲ್ಲಿ ಮೈದಾನದಲ್ಲೇ ಕುಸಿದು ಕುಳಿತರು.

ಆದ್ರೆ ಪಂದ್ಯದ ಬಳಿಕ ಜಪಾನ್ ಆಟಗಾರರು ಕ್ರೀಡಾ ಸ್ಫೂರ್ತಿ ಮೆರೆದಿದ್ದಾರೆ. ತಾವು ಉಳಿದುಕೊಂಡಿದ್ದ ಡ್ರೆಸ್ಸಿಂಗ್ ರೂಮ್ ನ್ನು ಆಟಗಾರರೇ ಶುಚಿಗೊಳಿಸಿದ್ದಾರೆ. ಅಲ್ಲಿಂದ ಹೊರಡುವ ಮುನ್ನ ಮಧ್ಯದಲ್ಲಿದ್ದ ಟೇಬಲ್ ಮೇಲೆ ಥ್ಯಾಂಕ್ಯೂ ಎಂಬ ಸಂದೇಶವನ್ನ ಬರೆದಿಟ್ಟು ಹೋಗಿದ್ದಾರೆ.

ಈ ಹಿಂದೆ ಜಪಾನ್ ಫುಟ್ಬಾಲ್ ಅಭಿಮಾನಿಗಳು ಮೈದಾನವನ್ನ ಶುಚಿಗೊಳಿಸಿ ಕ್ರೀಡಾ ಸ್ಫೂರ್ತಿ ಮೆರೆದಿದ್ದರು. ಈಗ ಜಪಾನ್ ಆಟಗಾರರು ಕೂಡ ಡ್ರಸ್ಸಿಂಗ್ ರೂಮ್ ಶುಚಿಗೊಳಿಸಿ ಆಟದ ಹಿರಿಮೆ ಎತ್ತಿಹಿಡಿದ್ದಾರೆ. ಆ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...