alex Certify
ಕನ್ನಡ ದುನಿಯಾ       Mobile App
       

Kannada Duniya

ಫುಟ್ ಬಾಲ್ ಪಂದ್ಯ ಸಮಬಲವಾದ ಬಳಿಕ ಅಭಿಮಾನಿಗಳು ಮಾಡಿದ್ರು ಈ ಕೆಲಸ

ರಷ್ಯಾದಲ್ಲಿ ನಡೀತಿರೋ ಫಿಫಾ ವರ್ಲ್ಡ್ ಕಪ್ ಫುಟ್ಬಾಲ್ ಅತ್ಯಂತ ರೋಚಕ ಕ್ಷಣಗಳಿಗೆ ಸಾಕ್ಷಿಯಾಗೋದಷ್ಟೇ ಅಲ್ಲ, ಅಭಿಮಾನಿಗಳ ಪಾಸಿಟೀವ್ ಗೇಮ್ ಸ್ಪಿರಿಟ್ಗೂ ಕನ್ನಡಿ ಹಿಡಿದಿದೆ.

ಜಪಾನ್ ಮತ್ತು ಸೆನೆಗಲ್ ನಡುವಿನ ಮ್ಯಾಚ್, ಅಂತಾ ಒಂದು ವಿಶೇಷ ದಾಖಲೆಗೆ ಸಾಕ್ಷಿಯಾಯ್ತು. ಜಪಾನ್ ಮತ್ತು ಸೆನೆಗಲ್ ನಡುವಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾಯ್ತು. ಉಭಯ ತಂಡಗಳು 2-2 ಗೋಲುಗಳಿಂದ ಸಮಬಲ ಸಾಧಿಸಿದ್ರು. ಆಟಗಾರರು ಆಡಿದ ಪಂದ್ಯ ಡ್ರಾನಲ್ಲಿ ಅಂತ್ಯವಾದ್ರೆ ಏನಂತೆ…? ಪಂದ್ಯದ ನಂತರ ನಡೆದ ಘಟನೆ ಮಾತ್ರ ವಿಶ್ವದ ಫುಟ್ಬಾಲ್ ಅಭಿಮಾನಿಗಳ ಹೃದಯ ಗೆದ್ದುಬಿಡ್ತು.

ರಷ್ಯಾದ ಯಾಕ್ಟಿನ್ಬರ್ಗ್ ಕ್ರೀಡಾಂಗಣದಲ್ಲಿನ ಪಂದ್ಯ ಮುಗಿದ ಬಳಿಕ ಜಪಾನ್ ಮತ್ತು ಸೆನಗಲ್ ತಂಡಗಳ ಅಭಿಮಾನಿಗಳು ಮೈದಾನದಲ್ಲಿನ ಕಸವನ್ನು ತಾವೇ ಕ್ಲೀನ್ ಮಾಡಿದ್ರು. ಸ್ವಯಂ ಪ್ರೇರಣೆಯಿಂದ ಮೈದಾನದಲ್ಲಿದ್ದ ಕಸ ಶುಚಿಗೊಳಿಸಿದರು. ಸ್ಟ್ಯಾಂಡ್ ಗಳ ನಡುವಿದ್ದ ಕೋಲಾ ಬಾಟಲಿಗಳು, ಆಹಾರ ಪದಾರ್ಥಗಳ ತ್ಯಾಜ್ಯವನ್ನು ತೆಗೆದು ಮುಂದಿನ ಪಂದ್ಯಕ್ಕೆ ಮೈದಾನವನ್ನ ಸಜ್ಜುಗೊಳಿಸಿದರು.

ಜಪಾನ್ ಮತ್ತು ಸೆನೆಗಲ್ ಫುಟ್ಬಾಲ್ ಪ್ರೇಮಿಗಳ ಈ ಗೇಮ್ ಸ್ಪಿರಿಟ್, ಟೀಮ್ ಸ್ಪಿರಿಟ್ ವಿಶ್ವದಾದ್ಯಂತ ಭಾರೀ ಪ್ರಶಂಸೆಗೆ ಒಳಗಾಗಿದೆ. ಫುಟ್ಬಾಲ್ ಪ್ರೇಮಿಗಳ ಕಳಕಳಿ ಸಾಮಾಜಿಕ ಜಾಲತಾಣಗಳಲ್ಲು ಮೆಚ್ಚುಗೆಗೆ ಪಾತ್ರವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...