alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟ್ ಆಟಗಾರರಿಗೆ ಬಿ.ಸಿ.ಸಿ.ಐ.ನಿಂದ ಬಂಪರ್

crick

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿ.ಸಿ.ಸಿ.ಐ.) ಆಟಗಾರರ ವೇತನವನ್ನು ದ್ವಿಗುಣಗೊಳಿಸಿದೆ.

ಟೀಂ ಇಂಡಿಯಾ ಆಟಗಾರರ 2017 -18 ನೇ ಸಾಲಿನ ವಾರ್ಷಿಕ ಒಪ್ಪಂದವನ್ನು ನವೀಕರಣಗೊಳಿಸಿದೆ. ಇದರೊಂದಿಗೆ ‘ಎ’ ದರ್ಜೆಯನ್ನು ಉಳಿಸಿಕೊಂಡಿರುವ ಆಟಗಾರರ ವೇತನ ಡಬಲ್ ಆಗಿದೆ. ಪಂದ್ಯಗಳ ಶುಲ್ಕದಲ್ಲಿಯೂ ಹೆಚ್ಚಳ ಮಾಡಲಾಗಿದೆ.

ವಾರ್ಷಿಕವಾಗಿ ‘ಎ’ ಗ್ರೇಡ್ ಆಟಗಾರರಿಗೆ 2 ಕೋಟಿ ರೂ., ಗ್ರೇಡ್ ‘ಬಿ’ ಆಟಗಾರರಿಗೆ 1 ಕೋಟಿ ರೂ. ಹಾಗೂ ಗ್ರೇಡ್ ‘ಸಿ’ ಆಟಗಾರರಿಗೆ 50 ಲಕ್ಷ ರೂ. ವೇತನ ನೀಡಲಾಗುವುದು.

ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ., ಏಕದಿನ ಪಂದ್ಯಕ್ಕೆ 6 ಹಾಗೂ ಟಿ -20 ಪಂದ್ಯಕ್ಕೆ 3 ಲಕ್ಷ ರೂ.ಗಳನ್ನು ಆಟಗಾರರು ಪಡೆದುಕೊಳ್ಳಲಿದ್ದಾರೆ.

ರವೀಂದ್ರ ಜಡೇಜ, ಮುರಳಿ ವಿಜಯ್, ಚೇತೇಶ್ವರ್ ಪೂಜಾರ ‘ಎ’ ಗ್ರೇಡ್ ಗೆ ಬಡ್ತಿ ಪಡೆದುಕೊಂಡಿದ್ದಾರೆ.

ಗ್ರೇಡ್ ‘ಎ’ ಆಟಗಾರರು:

ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ, ರವಿಚಂದ್ರನ್ ಅಶ್ವಿನ್, ಅಜಿಂಕ್ಯಾ ರೆಹಾನೆ, ಮುರಳಿ ವಿಜಯ್, ರವೀಂದ್ರ ಜಡೇಜ, ಚೇತೇಶ್ವರ ಪೂಜಾರ.

ಗ್ರೇಡ್ ‘ಬಿ’ ಆಟಗಾರರು:

ಕೆ.ಎಲ್. ರಾಹುಲ್, ಭುವನೇಶ್ವರ್ ಕುಮಾರ್, ರೋಹಿತ್ ಶರ್ಮ, ಮೊಹಮ್ಮದ್ ಶಮಿ, ವೃದ್ಧಿಮಾನ್ ಸಹಾ, ಇಶಾಂತ್ ಶರ್ಮ, ಉಮೇಶ್ ಯಾದವ್, ಯುವರಾಜ್ ಸಿಂಗ್, ಜಸ್ ಪ್ರೀತ್ ಬೂಮ್ರಾ.

ಗ್ರೇಡ್ ‘ಸಿ’ ಆಟಗಾರರು:

ಅಂಬಟಿ ರಾಯುಡು, ಅಮಿತ್ ಮಿಶ್ರಾ, ಶಿಖರ್ ಧವನ್, ಮನೀಶ್ ಪಾಂಡೆ, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡೆ, ಕರುಣ್ ನಾಯರ್, ಆಶೀಶ್ ನೆಹ್ರಾ, ಕೇದಾರ್ ಜಾಧವ್, ಆರ್ಥಿವ್ ಪಟೇಲ್, ಯಜುವೇಂದ್ರ ಚಾಹಲ್, ಧವಳ್ ಕುಲಕರ್ಣಿ, ಜಯಂತ್ ಯಾದವ್, ರಿಶಬ್ ಪಂತ್, ಶಾರ್ದೂಲ್ ಠಾಕೂರ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...