alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೇ ಓವರ್ ನಲ್ಲಿ 6 ಸಿಕ್ಸರ್, 69 ಎಸೆತಗಳಲ್ಲಿ 154 ರನ್

ರಾಜ್ ಕೋಟ್: ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜ, ಒಂದೇ ಓವರ್ ನಲ್ಲಿ 6 ಸಿಕ್ಸರ್ ಸಿಡಿಸುವ ಮೂಲಕ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆ ಆಶ್ರಯದಲ್ಲಿ ನಡೆದ ಅಂತರ ಜಿಲ್ಲಾ ಕ್ರಿಕೆಟ್ ಟೂರ್ನಿಯಲ್ಲಿ ಜಾಮ್ ನಗರ ತಂಡವನ್ನು ಪ್ರತಿನಿಧಿಸಿದ್ದ ರವೀಂದ್ರ ಜಡೇಜ, ಅಮ್ರೇಲಿ ತಂಡದ ಎದುರು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ.

69 ಎಸೆತಗಳಲ್ಲಿ 15 ಬೌಂಡರಿ, 10 ಸಿಕ್ಸರ್ ನೆರವಿನಿಂದ 154 ರನ್ ಗಳಿಸಿದ್ದಾರೆ. ಪಂದ್ಯದ 15 ನೇ ಓವರ್ ನಲ್ಲಿ ಆರ್ಭಟಿಸಿದ ಜಡೇಜ ಎಲ್ಲಾ ಎಸೆತಗಳಲ್ಲಿ ಸಿಕ್ಸರ್ ಸಿಡಿಸಿದ್ದಾರೆ. ಜಡೇಜ ಬ್ಯಾಟಿಂಗ್ ನೆರವಿನಿಂದ ಅವರ ತಂಡ 121 ರನ್ ಅಂತರದಿಂದ ಜಯಗಳಿಸಿದೆ.

ಏಕದಿನ ಪಂದ್ಯಗಳಿಂದ ಹೊರಗುಳಿದಿರುವ ಜಡೇಜ ಟೆಸ್ಟ್ ಪಂದ್ಯಗಳಲ್ಲಿ ಮಿಂಚಿದ್ದಾರೆ. ರಣಜಿ ಟೂರ್ನಿಯಲ್ಲಿ ಅವರು ದ್ವಿಶತಕ ಗಳಿಸಿದ್ದರು.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...