alex Certify
ಕನ್ನಡ ದುನಿಯಾ       Mobile App
       

Kannada Duniya

ನಾಳೆ ರೇವಾ ಕೈಗೆ ಉಂಗುರ ತೊಡಿಸಲಿದ್ದಾರೆ ರವೀಂದ್ರ ಜಡೇಜಾ

Ravindra

ಆಸ್ಟ್ರೇಲಿಯಾ ಪಂದ್ಯ ಮುಗಿಸಿ ಭಾರತಕ್ಕೆ ವಾಪಸ್ಸಾಗಿರುವ ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಮದುವೆಗೆ ಸಿದ್ಧರಾಗ್ತಿದ್ದಾರೆ. ನಾಳೆ ರಾಜ್ಕೋಟ್ ನಲ್ಲಿ ಅವರ ನಿಶ್ಚಿತಾರ್ಥ ನಡೆಯಲಿದೆ. ರೇವಾ ಎಂಬುವವರಿಗೆ ರವೀಂದ್ರ ಜಡೇಜಾ ಉಂಗುರ ತೊಡಿಸಲಿದ್ದಾರೆ.

ರಾಜ್ಕೋಟ್ ದ ರೆಸ್ಟೋರೆಂಟ್ ನಲ್ಲಿ ನಿಶ್ಚಿತಾರ್ಥ ನಡೆಯಲಿದೆ. ಜಡೇಜಾ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವ ಹುಡುಗಿ ರೇವಾ ಕೂಡ ರಾಜ್ಕೋಟ್ ನಿವಾಸಿ. ಅವರು ರಾಜ್ಕೋಟಾದ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡಿದ್ದಾರೆ. ಸದ್ಯ ದೆಹಲಿಯಲ್ಲಿ ಯು ಪಿ ಎಸ್ ಸಿ ತಯಾರಿ ನಡೆಸುತ್ತಿದ್ದಾರೆ.

ಜಡೇಜಾಗೆ 27 ವರ್ಷವಾಗಿದ್ದು, ರೇವಾಗೆ 25 ವರ್ಷ ವಯಸ್ಸಾಗಿದೆ. ರವೀಂದ್ರ ಜಡೇಜಾಗೆ ಜಾಮ್ನಗರ್ ದ ಸಂಪರ್ಕವಿದೆ. ಹಾಗೆ ಅವರು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವ ರೇವಾ ಜುನಗಢ್ ಜಿಲ್ಲೆಯ ಹದ ಗ್ರಾಮದವರಾಗಿದ್ದಾರೆ. ಸದ್ಯ ರೇವಾ ಕುಟುಂಬ ರಾಜ್ಕೋಟ್ ದಲ್ಲಿ ನೆಲೆಸಿದೆ.

ಮೂಲಗಳ ಪ್ರಕಾರ ನಾಳೆ ಬೆಳಿಗ್ಗೆ ಶುಭ ಮುಹೂರ್ತದಲ್ಲಿ ರವೀಂದ್ರ ಜಡೇಜಾ ನಿಶ್ಚಿತಾರ್ಥ ನಡೆಯಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...