alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿಯಿಂದ ಕೊಹ್ಲಿ ಕಲಿತಿದ್ದೇನು ಗೊತ್ತಾ….?

ಡ್ಯಾಶಿಂಗ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಧೋನಿಯಿಂದ ತಾವು ಕಲಿತಿದ್ದೇನು ಎಂಬುದನ್ನು ಬಹಿರಂಗಪಡಿಸಿದ್ದಾರೆ.

2018 ರ ಏಷ್ಯಾ ಕಪ್ ನಿಂದ ವಿಶ್ರಾಂತಿ ಪಡೆದಿರುವ ವಿರಾಟ್ ಕೊಹ್ಲಿ ಸಂದರ್ಶನವೊಂದರಲ್ಲಿ ಈ ಅಂಶ ತಿಳಿಸಿ ಅಚ್ಚರಿ ಮೂಡಿಸಿದ್ದಾರೆ. ಅಷ್ಟೇ ಅಲ್ಲ, ತಾವು ಧೋನಿಯಿಂದ ಎಷ್ಟು ಪ್ರಭಾವಿತನಾಗಿದ್ದೇನೆ ಎಂಬ ಸಂಗತಿಯನ್ನೂ ಹೊರಗೆಡಹಿದ್ದಾರೆ.

ನಾನು ಆಟದ ಬಗ್ಗೆ ಯೋಚಿಸುತ್ತೇನೆ ಮತ್ತು ಈ ಕಾರಣಕ್ಕೆ ನಾಯಕತ್ವವನ್ನು ಎಂಜಾಯ್ ಮಾಡುತ್ತೇನೆ. ಹಾಗೆಯೇ ಚೇಸಿಂಗ್ ಮಾಡುವುದಕ್ಕೆ ಹೆಚ್ಚು ಇಷ್ಟ ಪಡುತ್ತೇನೆ. ಆಟ ನಡೆಯುವಾಗ ಗುರಿ ತಲುಪಲು ಏನು ಮಾಡಬೇಕೆಂಬದನ್ನು ಹೆಚ್ಚು ಯೋಚಿಸುತ್ತೇನೆ, ಅದನ್ನು ಇಷ್ಟ ಪಡುವೆ ಎಂದು ಹೇಳಿಕೊಂಡಿದ್ದಾರೆ. ನಾನು ಸ್ಲಿಪ್ ನಲ್ಲಿ ಧೋನಿಗೆ ಅತಿ ಹತ್ತಿರದಲ್ಲಿ ನಿಲ್ಲುವ ಮೂಲಕ ಹೆಚ್ಚಿನದನ್ನು ಕಲಿತಿದ್ದೇನೆ ಮತ್ತು ಅವರ ಕಾರ್ಯತಂತ್ರವನ್ನು ಗಮನಿಸುತ್ತಿದ್ದೆ ಎಂದಿದ್ದಾರೆ.

ನಾಲ್ಕು ದಿನಗಳ ಟೆಸ್ಟ್ ಪಂದ್ಯ ನಡೆಸುವ ಐಸಿಸಿ ಪ್ರಸ್ತಾಪಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಟೆಸ್ಟ್ ಕ್ರಿಕೆಟ್ ಅನ್ನು ಟಿಂಕರ್ ಮಾಡಬಾರದು ಎಂದು ಹೇಳುವ ಮೂಲಕ ನಾಲ್ಕು ದಿನಕ್ಕೆ ಸೀಮಿತಗೊಳಿಸುವುದಕ್ಕೆ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಉತ್ತಮವಾಗಿ ಆಡುವಾಗ ಸಿಗುವ ತೃಪ್ತಿಯನ್ನು ವಿವರಿಸಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿರುವ ಅವರು, ಟೆಸ್ಟ್ ಕ್ರಿಕೆಟ್‌ನ ಸ್ವರೂಪ ಸುಂದರವಾದದ್ದು ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...