alex Certify
ಕನ್ನಡ ದುನಿಯಾ       Mobile App
       

Kannada Duniya

ಕೆರಿಬಿಯನ್ ಲೀಗ್: ಬ್ರಾವೋ ಸಿಕ್ಸರ್ ಸುರಿಮಳೆ

ಕೆರಿಬಿಯನ್ ಲೀಗ್ ನಲ್ಲಿ ಡ್ವೇಯ್ನ್ ಬ್ರಾವೋ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ.

ಖ್ಯಾತ ವಿಕ್ಷಕ ವಿವರಣೆಕಾರ ಟೋನಿ ಗ್ರೇಗ್, ಸತತ ಸಿಕ್ಸರ್ ಗಳನ್ನು ಬ್ಯಾಟ್ಸ್ ಮನ್ ಬಾರಿಸಿದ್ರೆ, `ಇಟ್ಸ್ ರೈನಿಂಗ್ ಸಿಕ್ಸ್’ ಎಂದು ಹೇಳುತ್ತಿದ್ದರು. ಈ ಮಾತು ಕೆರಿಬಿಯನ್ ಲೀಗ್ ನಲ್ಲಿ ಡ್ವೇಯ್ನ್ ಬ್ರಾವೋ ಆಡಿದ ಧಾಟಿಗೆ ಹೇಳಿ ಮಾಡಿಸಿದಂತಿದೆ.

ಹೌದು….ಟ್ರಿಬಾಗೊ ನೈಟ್ ರೈಡರ್ಸ್ ವಿರುದ್ಧ ಸೇಂಟ್ ಕಿಟ್ಸ್- ನೆವಿಸ್ ಪೇಟ್ರಿಯಾಟ್ಸ್ ಪಂದ್ಯ ನಡೆಯಿತು. ಈ ವೇಳೆ ಮೊದಲು ಬ್ಯಾಟ್ ಮಾಡಿದ ಟ್ರಿಬಾಗೊ ತಂಡ ಸವಾಲಿನ ಮೊತ್ತ ಕಲೆ ಹಾಕಿದೆ. ಈ ಮೊತ್ತಕ್ಕೆ ಕಾರಣದಾವರು ಬ್ರಾವೋ. ಅಕ್ಷರಶಃ, ವಿಂಡೀಸ್ ನ ಖ್ಯಾತ ಆಟಗಾರ ಸಿಕ್ಸರ್ ಗಳ ಸುರಿಮಳೆಗೈದಿದ್ದಾರೆ.

ಎದುರಾಳಿ ತಂಡದ ಅಲ್ಜರಿ ಜೋಸೆಫ್ 19ನೇ ಓವರ್ ಮಾಡಲು ಮುಂದಾದ್ರು. ಮೊದಲ ಬೌಲ್ ನಲ್ಲಿ ರನ್ ಬರಲಿಲ್ಲ. ಆದ್ರೆ, ನಂತರದ ಐದು ಎಸೆತಗಳನ್ನು, ಬ್ರಾವೋ ಪ್ರೇಕ್ಷಕರ ಗ್ಯಾಲರಿ ದರ್ಶನ ಮಾಡಿಸಿದ್ದಾರೆ. ಮಿಡಾನ್, ಸ್ಕ್ವೇರ್ ಲೆಗ್, ಬ್ಯಾಕ್ ವರ್ಡ್ ಪಾಯಿಂಟ್ ಮೇಲಿಂದ ಸಿಕ್ಸರ್ ಗಳನ್ನು ಬಾರಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟ್ರಿಬಾಗೊ ತಂಡ 20 ಓವರ್ ಗಳಲ್ಲಿ 4 ವಿಕೆಟ್ ಗೆ 199 ರನ್ ಕಲೆ ಹಾಕಿದೆ. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಸೇಂಟ್ ಕಿಟ್ಸ್ ತಂಡ 153 ಓವರ್ ಗಳಲ್ಲಿ 8 ವಿಕೆಟ್ ಗೆ 153 ರನ್ ಕಲೆ ಹಾಕಿ ಸೋಲು ಕಂಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...