alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಾಟ್- ಅನುಷ್ಕಾ ‘ಬ್ರೇಕ್ ಅಪ್’ ಕುರಿತ ಅಂತೆಕಂತೆಗಳಿಗೆ ಬಿತ್ತು ತೆರೆ

1454833778virat-kohli-and-anushka-sharma

ಟೀಮ್ ಇಂಡಿಯಾ ಆಟಗಾರ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಡುವೆ ಬಿರುಕುಂಟಾಗಿದೆ ಎಂಬ ವದಂತಿಗಳು ಹಲವು ದಿನಗಳಿಂದ ಕೇಳಿ ಬರುತ್ತಿದ್ದು, ಅದಕ್ಕೀಗ ಅಂತಿಮ ತೆರೆ ಬಿದ್ದಿದೆ.

ಜೋಡಿ ಹಕ್ಕಿಗಳಂತೆಯೇ ಇದುವರೆಗೂ ಕಾಣಿಸಿಕೊಳ್ಳುತ್ತಿದ್ದ ಈ ಜೋಡಿ ಈಗ ಬೇರ್ಪಟ್ಟಿರುವ ವಿಚಾರ ಅಧಿಕೃತವಾಗಿದೆ. ಸಾಮಾಜಿಕ ಜಾಲ ತಾಣದಲ್ಲಿ ವಿರಾಟ್ ಕೊಹ್ಲಿಯೇ ಸ್ವತಃ ಬ್ರೇಕ್ ಅಪ್ ಕುರಿತು ಸುಳಿವು ನೀಡಿದ್ದು, ಕೆಲ ಕ್ಷಣದಲ್ಲೇ ಅದನ್ನು ಡಿಲಿಟ್ ಮಾಡಿದ್ದರು.

ಆದರೆ ಸಾಮಾಜಿಕ ಜಾಲ ತಾಣದಲ್ಲಿ ಅವರನ್ನು ಫಾಲೋ ಮಾಡುತ್ತಿರುವ ಅಭಿಮಾನಿಗಳ ಹದ್ದಿನ ಕಣ್ಣಿನಿಂದ ಈ ವಿಷಯ ತಪ್ಪಿಸಿಕೊಳ್ಳಲಾಗಲಿಲ್ಲ. ಕೊಹ್ಲಿ ಹಾಗೂ ಅನುಷ್ಕಾ ಬೇರೆಯಾಗಲು ಇಬ್ಬರೂ ವೈವಾಹಿಕ ಜೀವನಕ್ಕಿಂತ ವೃತ್ತಿ ಬದುಕಿಗೆ ಒತ್ತು ಕೊಟ್ಟಿದ್ದೇ ಕಾರಣವೆನ್ನಲಾಗಿದ್ದು, ಸಾಮಾಜಿಕ ಜಾಲ ತಾಣ ಇನ್ ಸ್ಟಾಗ್ರಾಂನಲ್ಲಿ ಈಗ ಒಬ್ಬರನ್ನೊಬ್ಬರು ಅನ್ ಫಾಲೋ ಮಾಡಿಕೊಂಡು ‘ಬ್ರೇಕ್ ಅಪ್’ ವಿಚಾರ ಜಗಜ್ಜಾಹೀರುಗೊಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...