alex Certify
ಕನ್ನಡ ದುನಿಯಾ       Mobile App
       

Kannada Duniya

‘ದಂಗಲ್’ ನೋಡಿ ಕಣ್ಣೀರಿಟ್ಟಿದ್ದಾರೆ ಗೀತಾ ಪೋಗಟ್

geeta-dangal_1ಅಮೀರ್ ಖಾನ್ ಅಭಿನಯದ, ಕುಸ್ತಿ ಪಟು ಮಹಾವೀರ್ ಸಿಂಗ್ ಪೋಗಟ್ ಜೀವನಾಧರಿತ ಚಿತ್ರ ‘ದಂಗಲ್’ ಡಿಸೆಂಬರ್ 23 ರ ಶುಕ್ರವಾರದಂದು ಬಿಡುಗಡೆಯಾಗಿದೆ. ಬಿಡುಗಡೆಯಾದ ಕೇವಲ ಮೂರು ದಿನಗಳಲ್ಲೇ ನೂರು ಕೋಟಿ ರೂ. ಗಳಿಕೆ ಮಾಡಿರುವ ಈ ಚಿತ್ರ ಗಳಿಕೆಯಲ್ಲಿ ಹೊಸ ದಾಖಲೆಯನ್ನೇ ಬರೆಯಬಹುದೆಂಬ ನಿರೀಕ್ಷೆ ಮೂಡಿಸಿದೆ.

ತಮ್ಮ ಜೀವನಾಧರಿತ ಚಿತ್ರಕ್ಕೆ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರತಿಕ್ರಿಯೆಗೆ ಮಹಾವೀರ್ ಸಿಂಗ್ ಪೋಗತ್ ಕುಟುಂಬ ಸಂತಸಗೊಂಡಿದೆ. ಈ ಚಿತ್ರವನ್ನು ಮಹಾವೀರ್ ಸಿಂಗ್ ಹಾಗೂ ಪುತ್ರಿಯರಾದ ಗೀತಾ ಪೋಗಟ್, ಬಬಿತಾ ಪೋಗಟ್ ಕುಟುಂಬದ ಇತರೆ ಸದಸ್ಯರ ಜೊತೆ ವೀಕ್ಷಿಸಿದ್ದು, ಕೆಲವೊಂದು ಸನ್ನಿವೇಶಗಳ ವೇಳೆ ಭಾವುಕರಾಗಿದ್ದಾರೆ.

ಮಹಾವೀರ್ ಸಿಂಗ್ ಪಾತ್ರಧಾರಿ ಅಮೀರ್ ಖಾನ್ ಜೊತೆ ಗೀತಾ ಪೋಗಟ್ ಪಾತ್ರಧಾರಿ ಕುಸ್ತಿ ಮಾಡಿ ತಂದೆಯನ್ನೇ ಮಣಿಸುವ ದೃಶ್ಯ ನೋಡಿ ನಿಜ ಜೀವನದ ಗೀತಾ ಪೋಗಟ್ ಅಕ್ಷರಶಃ ಕಣ್ಣೀರಿಟ್ಟಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಬಂಗಾರದ ಪದಕ ಗೆದ್ದಿರುವ ಗೀತಾ ಪೋಗಟ್, ತಮ್ಮ ತಂದೆ ನೀಡಿದ್ದ ಕಠಿಣ ಅಭ್ಯಾಸದ ಕಾರಣಕ್ಕೆ ತಾವು ಇಂದು ಈ ಮಟ್ಟದ ಸಾಧನೆ ಮಾಡಲು ಕಾರಣವಾಗಿದೆ ಎಂದು ಹೇಳಿಕೊಂಡರಲ್ಲದೇ ಚಿತ್ರ ಸಹಜವಾಗಿ ಮೂಡಿ ಬಂದಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...