alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವಿಟ್ಟರ್ ನಲ್ಲಿ ಕಾಲೆಳೆದ ಅಭಿಮಾನಿಗೆ ಪಠಾಣ್ ಖಡಕ್ ಉತ್ತರ

irfan-pathan-son

ತಮ್ಮ ಫೇವರಿಟ್ ಸೆಲೆಬ್ರಿಟಿಗಳ ಮಕ್ಕಳ ಹೆಸರು ಆಯ್ಕೆಗೆ ಟ್ವಿಟ್ಟರ್ ಅನ್ನು ಜನರು ವೇದಿಕೆ ಮಾಡಿಕೊಂಡಂತಿದೆ. ಸೈಫ್ ಅಲಿಖಾನ್ ಹಾಗೂ ಕರೀನಾ ಕಪೂರ್ ತಮ್ಮ ಮಗನಿಗೆ ತೈಮುರ್ ಅಂತಾ ಹೆಸರಿಟ್ಟಿದ್ದಕ್ಕೆ ಟ್ವಿಟ್ಟರ್ ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಕ್ರಿಕೆಟಿಗ ಇರ್ಫಾನ್ ಪಠಾಣ್ ಅಂಥದ್ದೊಂದು ವಿವಾದದ ಕಿಡಿ ಹೊತ್ತಿಕೊಳ್ಳುವ ಮುನ್ನವೇ ಅದಕ್ಕೆ ನೀರು ಸುರಿದಿದ್ದಾರೆ.

ಇತ್ತೀಚೆಗಷ್ಟೆ ತಮಗೆ ಗಂಡು ಮಗುವಾಗಿರೋದಾಗಿ ಪಠಾಣ್ ಸಾಮಾಜಿಕ ತಾಣದಲ್ಲಿ ಖುಷಿ ಹಂಚಿಕೊಂಡಿದ್ರು. ಅಭಿಮಾನಿಗಳಿಂದ ಪಠಾಣ್ ಗೆ ಹಾರೈಕೆಯ ಸುರಿಮಳೆಯಾಗಿದೆ, ಅದರ ಜೊತೆಜೊತೆಗೆ ಮಗನಿಗೆ ಅಪ್ಪಿತಪ್ಪಿಯೂ ದಾವೂದ್ ಅಥವಾ ಯಾಕೂಬ್ ಅಂತಾ ಹೆಸರಿಡ್ಬೇಡಿ ಅನ್ನೋ ಬಿಟ್ಟಿ ಸಲಹೆಯನ್ನು ಕೂಡ ಅಭಿಮಾನಿಯೊಬ್ಬ ಕೊಟ್ಟಿದ್ದಾನೆ.

ಇದಕ್ಕೆ ಪಠಾಣ್ ಜವಾಬ್ ಕೂಡ ಅದ್ಭುತವಾಗಿಯೇ ಇತ್ತು. ಹೆಸರು ಏನೇ ಇರಲಿ ಅಪ್ಪ ಹಾಗೂ ದೊಡ್ಡಪ್ಪನಂತೆ ನನ್ನ ಮಗ ಕೂಡ ದೇಶಕ್ಕೆ ಕೀರ್ತಿ ತರ್ತಾನೆ ಅಂತಾ ಪಠಾಣ್ ಪ್ರತಿಕ್ರಿಯಿಸಿದ್ದಾರೆ. ಇದರ ಬೆನ್ನಲ್ಲೇ ತಮ್ಮ ಮಗನಿಗೆ ಇಮ್ರಾನ್ ಖಾನ್ ಪಠಾಣ್ ಅಂತಾ ಹೆಸರಿಟ್ಟಿರೋದಾಗಿ ಪ್ರಕಟಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...