alex Certify
ಕನ್ನಡ ದುನಿಯಾ       Mobile App
       

Kannada Duniya

ಗಂಭೀರ್ ಪಡೆ ಎದುರು ಮುಂಬೈಗೆ ರೋಚಕ ಜಯ

mum-gatm

ಮುಂಬೈ: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ ಮುಂಬೈ ಇಂಡಿಯನ್ಸ್ ಭರ್ಜರಿ ಜಯ ಗಳಿಸಿದೆ.

ಮೊದಲಿಗೆ ಬ್ಯಾಟಿಂಗ್ ಮಾಡಿದ ಕೋಲ್ಕತಾ ತಂಡ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 178 ರನ್ ಗಳಿಸಿತು. ಮನೀಶ್ ಪಾಂಡೆ 81, ಕ್ರಿಸ್ ಲಿನ್ 32, ಗೌತಮ್ ಗಂಭೀರ್ 19 ರನ್ ಗಳಿಸಿದ್ದಾರೆ. ಮನೀಶ್ ಪಾಂಡೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿ 47 ಎಸೆತಗಳಲ್ಲಿ 5 ಸಿಕ್ಸರ್, 5 ಬೌಂಡರಿ ಒಳಗೊಂಡ 81 ರನ್ ಗಳಿಸಿ ಗಮನ ಸೆಳೆದರು.

179 ರನ್ ಗೆಲುವಿನ ಗುರಿ ಪಡೆದ ಮುಂಬೈ ಇಂಡಿಯನ್ಸ್ ಪರವಾಗಿ ನಿತೀಶ್ ರಾಣಾ 50, ಹಾರ್ದಿಕ್ ಪಾಂಡ್ಯ ಅಜೇಯ 29 ರನ್ ಗಳಿಸಿದ್ದಾರೆ.

ಕೊನೆಯ ಓವರ್ ನಲ್ಲಿ 11 ರನ್ ಗಳಿಸಬೇಕಿದ್ದ ಮುಂಬೈ, ಇನ್ನು 1 ಎಸೆತ ಬಾಕಿ ಉಳಿದರುವಂತೆಯೇ ಜಯದ ನಗೆ ಬೀರಿತು. ಹಾರ್ದಿಕ್ ಪಾಂಡ್ಯ 11 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್ ನೆರವಿನಿಂದ ಅಜೇಯ 29 ರನ್ ಗಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...