alex Certify
ಕನ್ನಡ ದುನಿಯಾ       Mobile App
       

Kannada Duniya

ಮುಂಬೈಗೆ 146 ರನ್ ಅಂತರದ ದಾಖಲೆಯ ಗೆಲುವು

mi-mi

ದೆಹಲಿ: ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ, ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 146 ರನ್ ಅಂತರದಿಂದ ದಾಖಲೆಯ ಜಯ ಗಳಿಸಿದೆ.

213 ರನ್ ಗಳ ಗುರಿ ತಲುಪಲು ವಿಫಲವಾದ ಡೆಲ್ಲಿ ಕೇವಲ 13.4 ಓವರ್ ಗಳಲ್ಲಿ 66 ರನ್ ಗಳಿಗೆ ಎಲ್ಲ ವಿಕೆಟ್ ಕಳೆದುಕೊಂಡಿದೆ. ಇದರಿಂದಾಗಿ ಮುಂಬೈ ತಂಡ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತಿದೊಡ್ಡ 146 ರನ್ ಅಂತರದ ಗೆಲುವು ಕಂಡಿದೆ.

ಮೊದಲಿಗೆ ಬ್ಯಾಟಿಂಗ್ ಮಾಡಿದ ಮುಂಬೈ ತಂಡದ ಪರವಾಗಿ ಲಿಂಡೆಲ್ ಸಿಮನ್ಸ್ 66, ಕೀರಾನ್ ಪೋಲಾರ್ಡ್ 63 ರನ್ ಗಳಿಸಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಮುಂಬೈ ತಂಡ 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 212 ರನ್ ಗಳಿಸಿತು.

ಡೆಲ್ಲಿ ತಂಡ 13.4 ಓವರ್ ಗೆ ಆಲ್ ಔಟ್ ಆಗಿದೆ. ಕರಣ್ ನಾಯರ್ 21, ಕೋರಿ ಆಂಡರ್ಸನ್ 10 ರನ್ ಗಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...