alex Certify
ಕನ್ನಡ ದುನಿಯಾ       Mobile App
       

Kannada Duniya

ಉತ್ತಪ್ಪ, ಗಂಭೀರ್ ಅಬ್ಬರಕ್ಕೆ ಮಂಕಾದ ಪುಣೆ

utapa-a

ಪುಣೆ: ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಐ.ಪಿ.ಎಲ್. ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಭರ್ಜರಿ ಜಯಗಳಿಸಿದೆ.

ಪುಣೆ ಸೂಪರ್ ಜೈಂಟ್ಸ್ ನೀಡಿದ್ದ ಬೃಹತ್ ಗುರಿಯನ್ನು ಬೆನ್ನತ್ತಿದ ಕೆ.ಕೆ.ಆರ್. ಪರವಾಗಿ ರಾಬಿನ್ ಉತ್ತಪ್ಪ 87, ಗೌತಮ್ ಗಂಭೀರ್ 62 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೋಲ್ಕತ್ತ 7 ವಿಕೆಟ್ ಅಂತರದಿಂದ ಜಯಗಳಿಸಿದೆ.

ಮೊದಲಿಗೆ ಬ್ಯಾಟಿಂಗ್ ಮಾಡಿದ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್, ನಿಗದಿತ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತು. ಅಜಿಂಕ್ಯಾ ರೆಹಾನೆ 46, ರಾಹುಲ್ ತ್ರಿಪಾಠಿ 38, ಸ್ಟೀವನ್ ಸ್ಮಿತ್ ಅಜೇಯ 51, ಎಂ.ಎಸ್. ಧೋನಿ 23 ರನ್ ಗಳಿಸಿದ್ದಾರೆ.

183 ಗೆಲುವಿನ ಗುರಿ ಪಡೆದ ಕೆ.ಕೆ.ಆರ್. ಇನ್ನು 1.5 ಓವರ್ ಬಾಕಿ ಇರುವಾಗಲೇ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...