alex Certify
ಕನ್ನಡ ದುನಿಯಾ       Mobile App
       

Kannada Duniya

IPL: ಬೆಂಗಳೂರಿನಲ್ಲಿ ಧೋನಿ –ಕೊಹ್ಲಿ ಬಳಗದ ಫೈಟ್

ಬೆಂಗಳೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಐ.ಪಿ.ಎಲ್. ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಮಾಜಿ ನಾಯಕ ಎಂ.ಎಸ್. ಧೋನಿ ನೇತೃತ್ವದ ತಂಡಗಳು ಮುಖಾಮುಖಿಯಾಗಲಿವೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು, ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಹಣಾಹಣಿಗೆ ವೇದಿಕೆ ಸಜ್ಜಾಗಿದ್ದು, ಗೆಲುವಿಗೆ ಉಭಯ ತಂಡಗಳು ಕಾರ್ಯತಂತ್ರ ರೂಪಿಸಿವೆ.

ಆರ್.ಸಿ.ಬಿ.ಪರವಾಗಿ ವಿರಾಟ್ ಕೊಹ್ಲಿ, ಎಬಿ ಡಿ’ವಿಲಿಯರ್ಸ್, ಯಜುವೇಂದ್ರ ಚಾಹಲ್ ಭರ್ಜರಿ ಪ್ರದರ್ಶನ ನೀಡುವ ನಿರೀಕ್ಷೆ ಇದೆ. ಚೆನ್ನೈ ತಂಡಕ್ಕೆ ಧೋನಿ, ಸುರೇಶ್ ರೈನಾ, ಶೇನ್ ವಾಟ್ಸನ್ ಬಲ ತುಂಬಿದ್ದು, ಇಂದಿನ ಪಂದ್ಯದಲ್ಲಿಯೂ ಮಿಂಚುವ ನಿರೀಕ್ಷೆ ಇದೆ.

ಚಿನ್ನಸ್ವಾಮಿ ಮೈದಾನದಲ್ಲಿ ಆರ್.ಸಿ.ಬಿ. ಮತ್ತು ಚೆನ್ನೈ ತಂಡಗಳ ನಡುವೆ 7 ಪಂದ್ಯ ನಡೆದಿದ್ದು, ಉಭಯ ತಂಡಗಳು ತಲಾ 3 ಪಂದ್ಯಗಳನ್ನು ಜಯಿಸಿವೆ. 1 ಪಂದ್ಯದ ಫಲಿತಾಂಶ ಬಂದಿಲ್ಲ. ಇಂದು ರಾತ್ರಿ 8 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...