alex Certify
ಕನ್ನಡ ದುನಿಯಾ       Mobile App
       

Kannada Duniya

IPL ಸಂಭ್ರಮಕ್ಕೆ ಶುರುವಾಯ್ತು ಕೌಂಟ್ ಡೌನ್

ipl-ipl

ಹೈದರಾಬಾದ್: ಕ್ರಿಕೆಟ್ ಲೋಕದ ವರ್ಣರಂಜಿತ ಟೂರ್ನಿ, ಹೊಡಿ ಬಡಿ ಆಟವೆಂದೇ ಹೇಳಲಾಗುವ ಐ.ಪಿ.ಎಲ್. 10 ನೇ ಆವೃತ್ತಿಗೆ ನಾಳೆ ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ.

ಈ ಬಾರಿ ಉದ್ಘಾಟನಾ ಸಮಾರಂಭ ವಿಶೇಷವಾಗಿರಲಿದೆ. ಐ.ಪಿ.ಎಲ್. ಪ್ರಾಂಚೈಸಿಗಳನ್ನು ಹೊಂದಿರುವ 8 ನಗರಗಳಲ್ಲಿಯೂ ಉದ್ಘಾಟನಾ ಸಮಾರಂಭ ನಡೆಯಲಿದೆ. ಮೊದಲ ಪಂದ್ಯ ಉದ್ಘಾಟನೆಗೂ ಮೊದಲು ಅದ್ಧೂರಿ ಸಮಾರಂಭ ನಡೆಯಲಿದೆ.

ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮೊದಲ ಪಂದ್ಯ ಏಪ್ರಿಲ್ 8 ರಂದು ನಡೆಯುವ ಮೊದಲು ಉದ್ಘಾಟನಾ ಸಮಾರಂಭ ನಡೆಯಲಿದೆ.

ತಂಡಗಳು ಮತ್ತು ನಾಯಕರು:

ಎಬಿ ಡಿ’ವಿಲಿಯರ್ಸ್ ನೇತೃತ್ವದಲ್ಲಿ ಆರ್.ಸಿ.ಬಿ. ತಂಡದ ಆಟಗಾರರು ಕಣಕ್ಕಿಳಿಯಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ರೋಹಿತ್ ಶರ್ಮ ನಾಯಕರಾಗಿದ್ದು, ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಗೌತಮ್ ಗಂಭೀರ್ ಮುನ್ನಡೆಸಲಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಡೇವಿಡ್ ವಾರ್ನರ್ ನಾಯಕರಾಗಿದ್ದಾರೆ. ಡೆಲ್ಲಿ ಡೇರ್ ಡೆವಿಲ್ಸ್ ತಂಡಕ್ಕೆ ಜಹೀರ್ ಖಾನ್ ನಾಯಕರಾಗಿದ್ದು, ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಗ್ಲೆನ್ ಮ್ಯಾಕ್ಸ್ ವೆಲ್ ಮುನ್ನಡೆಸುವರು.

ಗುಜರಾತ್ ಲಯನ್ಸ್ ಗೆ ಸುರೇಶ್ ರೈನಾ, ಪುಣೆ ಸೂಪರ್ ಜೈಂಟ್ಸ್ ತಂಡಕ್ಕೆ ಸ್ಟೀವನ್ ಸ್ಮಿತ್ ನಾಯಕರಾಗಿದ್ದಾರೆ.

ಬಹುಮಾನದ ಮೊತ್ತ:

ಐ.ಪಿ.ಎಲ್.ನಲ್ಲಿ ಹಣದ ಹೊಳೆಯೇ ಹರಿಯಲಿದೆ. 10 ನೇ ಆವೃತ್ತಿಯಲ್ಲಿ ಚಾಂಪಿಯನ್ಸ್ ಗೆ 20 ಕೋಟಿ ರೂ., ರನ್ನರ್ಸ್ ಅಪ್ ಗೆ 11 ಕೋಟಿ ರೂ. ಹಾಗೂ ಪ್ಲೇ ಆಫ್ ತಲುಪಿದ ತಂಡಗಳಿಗೆ ತಲಾ 7.5 ಕೋಟಿ ರೂ ಬಹುಮಾನ ನೀಡಲಾಗುವುದು.

ಸರದಾರರು:

ಐ.ಪಿ.ಎಲ್.ನಲ್ಲಿ ಅತಿಹೆಚ್ಚು ರನ್ ಗಳಿಸಿರುವುದು ಆರ್.ಸಿ.ಬಿ. ಆಟಗಾರ ವಿರಾಟ್ ಕೊಹ್ಲಿ. ಅವರು 4110 ರನ್ ಕಲೆ ಹಾಕಿದ್ದಾರೆ. ಆರ್.ಸಿ.ಬಿ.ಯ ಕ್ರಿಸ್ ಗೇಲ್ 251 ಸಿಕ್ಸರ್ ಬಾರಿಸಿ ಅತಿಹೆಚ್ಚು ಸಿಕ್ಸರ್ ಸಿಡಿಸಿದವರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಮಾಲಿಂಗಾ 143 ವಿಕೆಟ್ ಪಡೆದಿದ್ದು, ಹೆಚ್ಚು ವಿಕೆಟ್ ಪಡೆದ ಆಟಗಾರನಾಗಿದ್ದಾರೆ. ಗುಜರಾತ್ ಲಯನ್ಸ್ ತಂಡದ ದಿನೇಶ್ ಕಾರ್ತಿಕ್ ಅತಿ ಹೆಚ್ಚು(98) ಬಲಿ ಪಡೆದ ವಿಕೆಟ್ ಕೀಪರ್ ಆಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...