alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ ನಲ್ಲಿ ಶತಕೋಟಿ ಗಳಿಸಿ ಕೊಹ್ಲಿ ಹಿಂದಿಕ್ಕಿದ್ದಾರೆ ಇಬ್ಬರು ದಿಗ್ಗಜರು

ಐಪಿಎಲ್ ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಆಟಗಾರರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಂದಿದ್ದಾರೆ ಎಂದುಕೊಂಡ್ರೆ ನಿಮ್ಮ ಊಹೆ ತಪ್ಪು. ಏಕೆಂದ್ರೆ ಕೊಹ್ಲಿಗಿಂತ ಮಹೇಂದ್ರ ಸಿಂಗ್ ಧೋನಿ ಹಾಗೂ ರೋಹಿತ್ ಶರ್ಮಾ ಮುಂದಿದ್ದಾರೆ. ಐಪಿಎಲ್ ಗಳಿಕೆಯಲ್ಲಿ ಧೋನಿ ಹಾಗೂ ಶರ್ಮಾ ಶತಕೋಟಿ ಮೊತ್ತದ ಗಡಿ ದಾಟಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಈವರೆಗೆ ಐಪಿಎಲ್ ನಲ್ಲಿ 107.84 ಕೋಟಿ ರೂಪಾಯಿ ಗಳಿಸಿದ್ದಾರೆ. ನಂತ್ರದ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಇದ್ದು ಅವ್ರು ಐಪಿಎಲ್ ನಲ್ಲಿ ಈವರೆಗೆ ಗಳಿಸಿದ ಹಣ 101.60 ಕೋಟಿ.

ವೃತ್ತಿಪರ ಆಟಗಾರರ ಸಂಬಳವನ್ನು ಲೆಕ್ಕ ಮಾಡುವ ಮನಿಬಾಲ್ ಈ ಬಗ್ಗೆ ಮಾಹಿತಿ ನೀಡಿದೆ. ಅದ್ರ ಪ್ರಕಾರ 2008ರಿಂದ ಈವರೆಗೆ ಕೊಹ್ಲಿ ಗಳಿಕೆ ಗಂಭೀರ್ (94.62 ಕೋಟಿ) ನಂತ್ರ ನಾಲ್ಕನೇ ಸ್ಥಾನದಲ್ಲಿದೆ. ಟೀಂ ಇಂಡಿಯಾ ನಾಯಕ ಕೊಹ್ಲಿ ಈವರೆಗೆ 92.20 ಕೋಟಿ ಗಳಿಸಿದ್ದಾರೆ. ಕೊಹ್ಲಿ ನಂತ್ರ ಯುವರಾಜ್ ಸಿಂಗ್ 83.60 ಕೋಟಿ ರೂ.ಗಳಿಸಿ ಐದನೇ ಸ್ಥಾನದಲ್ಲಿದ್ದರೆ ಸುರೇಶ್ ರೈನಾ 77.74 ಕೋಟಿ ಗಳಿಕೆಯೊಂದಿಗೆ ಆರನೇ ಸ್ಥಾನದಲ್ಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...