alex Certify
ಕನ್ನಡ ದುನಿಯಾ       Mobile App
       

Kannada Duniya

IPL: ಬೆಂಗಳೂರಲ್ಲಿ ಅಭ್ಯಾಸ ನಡೆಸಿದ RCB ನಾಯಕ ಕೊಹ್ಲಿ

ಬೆಂಗಳೂರು: ಕ್ರಿಕೆಟ್ ಲೋಕದ ಕಲರ್ ಫುಲ್ ಟೂರ್ನಿ ಎಂದೇ ಹೆಸರಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ 11 ನೇ ಆವೃತ್ತಿಗೆ ಕ್ಷಣಗಣನೆ ಶುರುವಾಗಿದೆ.

ಈಗಾಗಲೇ ತಂಡಗಳು ಭರ್ಜರಿ ತಯಾರಿ ನಡೆಸಿವೆ. ಅಂತೆಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಅಭ್ಯಾಸ ನಡೆಸಿದೆ. ತಂಡದ ನಾಯಕ ವಿರಾಟ್ ಕೊಹ್ಲಿ ಬೆಂಗಳೂರಿಗೆ ಆಗಮಿಸಿದ್ದು, ಅಭ್ಯಾಸದಲ್ಲಿ ನಿರತರಾಗಿದ್ದಾರೆ.

ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಟಿ -20 ಟೂರ್ನಿಯಿಂದ ವಿರಾಟ್ ಕೊಹ್ಲಿ ಹೊರಗುಳಿದಿದ್ದರು. ವಿಶ್ರಾಂತಿ ಬಳಿಕ ಐ.ಪಿ.ಎಲ್. ಟೂರ್ನಿಗೆ ಅವರು ಆಗಮಿಸಿದ್ದಾರೆ.

ಏಪ್ರಿಲ್ 7 ರಂದು ಪ್ರಸಕ್ತ ಸಾಲಿನ ಐ.ಪಿ.ಎಲ್. ಟೂರ್ನಿಗೆ ಚಾಲನೆ ಸಿಗಲಿದೆ. ಏಪ್ರಿಲ್ 8 ರಂದು ಆರ್.ಸಿ.ಬಿ. ಮೊದಲ ಪಂದ್ಯವನ್ನು ಆಡಲಿದೆ. ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಆರ್.ಸಿ.ಬಿ. ಉತ್ತಮ ಪ್ರದರ್ಶನ ನೀಡಲು ಸಜ್ಜಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...