alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ಪಂದ್ಯದಲ್ಲೇ ಕೊಹ್ಲಿ ಪಡೆಗೆ ಆಘಾತ, ಕೆ.ಕೆ.ಆರ್.ಗೆ ಜಯ

ಕೋಲ್ಕತ್ತಾ: ಇಂಡಿಯನ್ ಪ್ರೀಮಿಯರ್ ಲೀಗ್(ಐ.ಪಿ.ಎಲ್.) ಪ್ರಸಕ್ತ ಟೂರ್ನಿಯ ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್.ಸಿ.ಬಿ.) ಸೋಲು ಕಂಡಿದೆ.

ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 4 ವಿಕೆಟ್ ಅಂತರದಿಂದ ಜಯಗಳಿಸಿದೆ. ಆರ್.ಸಿ.ಬಿ. ನೀಡಿದ 177 ರನ್ ಗೆಲುವಿನ ಗುರಿ ಪಡೆದ ಕೆ.ಕೆ.ಆರ್. 18.5 ಓವರ್ ಗಳಲ್ಲಿ ಗುರಿ ತಲುಪುವ ಮೂಲಕ ಜಯ ಗಳಿಸಿದೆ.

ಸುನಿಲ್ ನರೈನ್(17 ಎಸೆತದಲ್ಲಿ 50 ರನ್) ಅಮೋಘ ಪ್ರದರ್ಶನ ನೀಡಿ ಆರ್.ಸಿ.ಬಿ. ಗೆಲುವನ್ನು ಕಸಿದುಕೊಂಡಿದ್ದಾರೆ. ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ ಪಡೆ ಆರಂಭಿಕ ಆಘಾತ ಅನುಭವಿಸಿತು. ಬ್ರೆಂಡನ್ ಮೆಕಲಮ್ 43, ಎಬಿ ಡಿ’ವಿಲಿಯರ್ಸ್ 44, ವಿರಾಟ್ ಕೊಹ್ಲಿ 31, ಮನ್ ದೀಪ್ ಸಿಂಗ್ 37 ರನ್ ಗಳಿಸಿದರು. 20 ಓವರ್ ಗಳಲ್ಲಿ 176 ರನ್ ಗಳಿಸಿದ ಆರ್.ಸಿ.ಬಿ. 177 ರನ್ ಗುರಿ ನೀಡಿತು.

ಕೋಲ್ಕತ್ತಾ ಪರ ನರೈನ್ 50, ದಿನೇಶ್ ಕಾರ್ತಿಕ್ 35, ನಿತೀಶ್ ರಾಣಾ 34 ರನ್ ಗಳಿಸಿ ತಂಡದ ಗೆಲುವಿನಲ್ಲಿ ಭಾಗಿಯಾದರು. ಏಪ್ರಿಲ್ 13 ರಂದು ಬೆಂಗಳೂರಿನಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಆರ್.ಸಿ.ಬಿ. ಮುಂದಿನ ಪಂದ್ಯ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್:

ಆರ್.ಸಿ.ಬಿ. -176/7(20 ಓವರ್), ಕೆ.ಕೆ.ಆರ್. -177/6(18.5 ಓವರ್)

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...